ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಮಾಣು ಒಪ್ಪಂದ: ಸಿಪಿಎಂ ಬಿಗಿ ನಿಲುವು
ಐಎಇಎ ಜತೆ ಸಮಾಲೋಚನೆ ಮಾಡುತ್ತಿದ್ದರೂ, ಅಮೆರಿಕ-ಭಾರತ ಪರಮಾಣು ಒಪ್ಪಂದ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಪಿಎಂ ತನ್ನ ಕೇಂದ್ರೀಯ ಸಮಿತಿ ಸಭೆಯಲ್ಲಿ ಶನಿವಾರ ತಿಳಿಸುವ ಮೂಲಕ ತನ್ನ ನಿಲುವನ್ನು ಬಿಗಿಗೊಳಿಸಿದೆ. ಗುಜರಾತ್ ಚುನಾವಣೆಗೆ ಒಂದು ದಿನದ ಮುನ್ನ ಸಿಪಿಎಂ ಆದೇಶ ಹೊರಬಿದ್ದಿದೆ. ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಎಂ.ಕೆ. ಪಾಂಡೆ ಮಾತನಾಡುತ್ತಾ, ಪರಮಾಣು ಒಪ್ಪಂದದ ಕುರಿತ ಪಕ್ಷದ ನಿಲುವು ಸ್ಪಷ್ಟವಾಗಿದೆ.

ಒಪ್ಪಂದವನ್ನು ಅನುಷ್ಠಾನಕ್ಕೆ ತರುವುದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಮತ್ತು ನಮ್ಮ ನಿಲುವೂ ಬದಲಾಗಿಲ್ಲ ಎಂದು ಅವರು ನುಡಿದರು.ಮುಂದಿನ ವರ್ಷ ಪಕ್ಷದ ಸಮಾವೇಶಕ್ಕೆ ಮುನ್ನ ಆರ್ಥಿಕ, ವಿದೇಶಾಂಗ ಮತ್ತು ನೀತಿ ವಿಷಯಗಳನ್ನು ಕುರಿತ ಪಕ್ಷದ ನಿಲುವಿಗೆ ಅಂತಿಮಸ್ವರೂಪ ನೀಡಲು ಕೊನೆಯ ದಿನದ ಸಭೆ ನಡೆಸಲಾಯಿತು. ಸಿಪಿಎಂ ತನ್ನ ನಿಲುವನ್ನು ಬಿಗಿಗೊಳಿಸಿರುವುದನ್ನು ಅಮೆರಿಕದ ಜತೆ ಪರಮಾಣು ಒಪ್ಪಂದವನ್ನು ಶತಾಯಗತಾಯ ವಿರೋಧಿಸುವ ತನ್ನ ಆರಂಭಿಕ ನಿಲುವಿಗೆ ಪುನಃ ಹಿಂತಿರುಗುತ್ತಿದೆಯೆಂದು ವ್ಯಾಖ್ಯಾನಿಸಲಾಗಿದೆ.

ಗುಜರಾತ್ ಚುನಾವಣೆಗೆ ಮನ್ನ ಸರ್ಕಾರವನ್ನು ಅಭದ್ರಗೊಳಿಸಲು ಇಚ್ಛಿಸದ ಸಿಪಿಎಂ ಐಎಇಎ ಜತೆ ಆರಂಭಿಕ ಮಾತುಕತೆಗೆ ಸರ್ಕಾರಕ್ಕೆ ಅವಕಾಶ ನೀಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿತ್ತು. ಕೋಮುವಾದಿ ಬಿಜೆಪಿ ಮತ್ತು ಅಮೆರಿಕದ ಸಾಮ್ರಾಜ್ಯಶಾಹಿತ್ವ ಎರಡನ್ನೂ ಸಿಪಿಎಂ ಸಮಾನವಾಗಿ ವಿರೋಧಿಸುತ್ತದೆಂದು ತಿಳಿಸಿದೆ. ಇದಕ್ಕೆ ಮುನ್ನ ಪರಮಾಣು ಒಪ್ಪಂದದ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ತಿಳಿಸಿದ್ದ ಸಿಪಿಎಂ ಈಗ ಗುಜರಾತ್ ಚುನಾವಣೆ ಪ್ರಕ್ರಿಯೆ ಮುಗಿದಿರುವುದರಿಂದ ದ್ವನಿ ಬದಲಿಸಿದೆಯೆಂದು ಭಾವಿಸಲಾಗಿದೆ.
ಮತ್ತಷ್ಟು
ಸೋನಿಯ, ಮೋದಿಗೆ ಆಯೋಗದಿಂದ ಮುಕ್ತಿ
ಮುಂದಿನ ಕೃತಿ ತಡೆಗೆ ತಸ್ಲೀಮಾ ನಿರ್ಧಾರ
ನಾಳೆ ಗುಜರಾತ್ ಚುನಾವಣೆಯ ಮತಎಣಿಕೆ
ಸರಣಿ ಸ್ಫೋಟ: ಇಬ್ಬರು ಉಗ್ರಗಾಮಿಗಳ ಬಂಧನ
ಸರ್ಕಾರದ ವಿರುದ್ಧ ಕಿಡಿಕಾರಿದ ನಾರಾಯಣ ರಾಣೆ
ವಿದೇಶಿ ಪೌರರ ನೀತಿ ತಸ್ಲೀಮಾಗೂ ಅನ್ವಯ