ದೇಶದ ರಾಜಕೀಯ ಪಂಡಿತರುಗಳ ಪಕ್ಷಗಳ ಆಸಕ್ತಿಯನ್ನು ತನ್ನತ್ತ ಸೆಳೆದಿದ್ದ ಗುಜರಾತ್ ವಿಧಾನ ಸಭೆಯ ಚುನಾವಣಾ ಫಲಿತಾಂಶ ಹೊರಬರಲು ಪ್ರಾರಂಭವಾಗಿದ್ದು. ಭಾರತೀಯ ಜನತಾ ಪಕ್ಷ 116 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 62 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಸತತವಾಗಿ ಎರಡು ಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ನರೇಂದ್ರ ಮೋದಿ ಮೂರನೆ ಬಾರಿ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಗುಜರಾತ್ ವಿಧಾನ ಸಭೆಯ 182 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಚುನಾವಣಾ ಆಯೋಗವು ಮತ ಎಣಿಕೆ ಕಾರ್ಯವನ್ನು 37 ಕೇಂದ್ರಗಳಲ್ಲಿ ಆಯೋಜಿಸಿದ್ದು. ಗುಜರಾತ್ ವಿಧಾನಸಭಾ ಚುನಾವಣೆಗೆ ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್‌ಗಳನ್ನು ಬಳಸಲಾಗಿದೆ.
|