ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರದ ಚುಕ್ಕಾಣಿ ಕೈಗೆ: ಮಾಯಾವತಿ ಕನಸು
PTI
ಗುಜರಾತ್ ಚುನಾವಣೆಯ ಫಲಿತಾಂಶದಿಂದ ಧೃತಿಗೆಡದ ಬಿಎಸ್‌ಪಿ ವರಿಷ್ಠೆ ಮಾಯಾವತಿ ರಾಷ್ಟ್ರದ ಅಧಿಕಾರ ಚುಕ್ಕಾಣಿಯನ್ನು ಹಿಡಿಯುವ ಕನಸು ಕಂಡಿದ್ದಾರೆ. ಎಲ್ಲ ಪ್ರಮುಖ ರಾಜ್ಯಗಳಲ್ಲಿ ಉತ್ತರಪ್ರದೇಶದ ಪ್ರಯೋಗವನ್ನು ಪುನರಾವರ್ತಿಸಿ ಮುಂದಿನ ಚುನಾವಣೆ ಬಳಿಕ ರಾಷ್ಟ್ರವನ್ನು ಮುನ್ನಡೆಸುವ ಗುರಿ ಹೊಂದಿರುವುದಾಗಿ ಅವರು ಹೇಳಿದರು.

ನನ್ನ ನಾಯಕತ್ವದಲ್ಲಿ ಕೇಂದ್ರದಲ್ಲಿ ಅಧಿಕಾರ ಸ್ಥಾಪನೆಗೆ ಬಿಎಸ್‌ಪಿಗೆ ಅವಕಾಶ ನಿಚ್ಚಳವಾಗಿದೆ. ನನ್ನ ನಾಯಕತ್ವದಲ್ಲಿ ಬಿಎಸ್‌ಪಿ ರಾಷ್ಟ್ರದ ಅಧಿಕಾರವನ್ನು ಕೈಗೆ ತೆಗೆದುಕೊಳ್ಳುತ್ತದೆಂದು ಅವರು ಹಾಂಕಾಂಗ್ ಮೂಲದ ಸಿಎಫ್‌ಒ ಏಶ್ಯಾ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಮುಂದಿನ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರವನ್ನು ತಾವು ವಹಿಸುತ್ತೀರಾ ಎಂದು ಮಾಯಾವತಿ ಅವರನ್ನು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು.

ಎಲ್ಲ ಪ್ರಮುಖ ರಾಜ್ಯಗಳಲ್ಲಿ ಕೆಳವರ್ಗದ ದಲಿತರನ್ನು ಮತ್ತು ಮೇಲ್ಜಾತಿಯ ಹಿಂದುಗಳನ್ನು ಅಲ್ಪಸಂಖ್ಯಾತರ ಜತೆಗೆ ತಮ್ಮ ಪಕ್ಷದತ್ತ ಸೆಳೆಯುವುದಾಗಿ ಅವರು ನುಡಿದರು. "ಪಕ್ಷವನ್ನು ಒಂದು ರಾಷ್ಟ್ರೀಯ ಶಕ್ತಿಯಾಗಿ ಮತ್ತು ವಿಶಿಷ್ಠ ಗುರುತಾಗಿ ರೂಪುಗೊಳ್ಳಲು ನಾನು ಶ್ರಮ ಪಡುತ್ತಿದ್ದೇನೆ.

ರಾಜಕೀಯವಾಗಿ ಸಕ್ರಿಯವಾಗಿರುವ ಪ್ರಾದೇಶಿಕ ಗುಂಪುಗಳ ಜತೆ ನಾನು ಹೊಂದಾಣಿಕೆಗೆ ರೂಪಿಸಲು ಯತ್ನಿಸುತ್ತಿದ್ದು, ಅವರು ನಮ್ಮ ಪ್ರಚಾರದಲ್ಲಿ ಮೌಲ್ಯಯುತ ಪಾಲುದಾರರಾಗಲಿದ್ದಾರೆ" ಎಂದು ಅವರು ನುಡಿದರು. ಮೇಲ್ವರ್ಗ ಮತ್ತು ಕೆಳಜಾತಿಯ ಜನರ ನಡುವೆ ಸಮತೋಲನ ಸಾಧ್ಯವೇ ಎಂದು ಪ್ರಶ್ನಿಸಿದಾಗ, "ದಲಿತರಿಗೆ ಬೆಂಬಲ ನೀಡುವುದರಲ್ಲಿ ಅವರ ಹಿತಾಸಕ್ತಿ ಅಡಗಿದೆ ಎಂದು ಮೇಲ್ಜಾತಿಯ ಹಿಂದುಗಳಿಗೆ ತಿಳಿದಿದೆ. ಮೇಲ್ಜಾತಿಯ ಹಿಂದುಳಿಗೆ ರಾಜಕೀಯದಲ್ಲಿ ಸ್ಥಳಾವಕಾಶ ನೀಡುವುದಕ್ಕೆ ದಲಿತರ ಆಕ್ಷೇಪವಿಲ್ಲ.

ಯುಪಿಎ ಮತ್ತು ಎನ್‌ಡಿಎ ಅನುಸರಿಸಿರುವ ಒಡೆದುಆಳುವ ರಾಜಕೀಯವು ದಲಿತರಿಗೆ ಅನುಕೂಲಕರವಾಗಿಲ್ಲ ಎಂದು ಮನದಟ್ಟು ಮಾಡಲು ಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ಮತ್ತಷ್ಟು
ನರೇಂದ್ರ ಮೋದಿ ನಾಳೆ ಪ್ರಮಾಣವಚನ
ಕೋಮು ಸಿದ್ಧಾಂತದ ವಿರುದ್ಧ ಹೋರಾಟಕ್ಕೆ ಕರೆ
ಗುಜರಾತ್‌ನಲ್ಲಿ ಇಂದು ಶಾಸಕಾಂಗ ಸಭೆ
ಗುಜರಾತ್: ಬಿಜೆಪಿಗೆ ಭರ್ಜರಿ ಗೆಲುವು
ಮಾಯಾ ವಿರುದ್ಧ ಸಂಚು: 2 ಉಗ್ರರು ಬಲಿ
ಮೋಡಿ ಮಾಡದ ಸಾವಿನ ವ್ಯಾಪಾರಿ ಹಿಯಾಳಿಕೆ