ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾನು ಪಕ್ಷಕ್ಕಿಂತ ದೊಡ್ಡವನಲ್ಲ: ಮೋದಿ
ಪಕ್ಷಕ್ಕಿಂತ ಮೋದಿ ದೊಡ್ಡವರು ಎಂದು ಬಿಂಬಿಸುತ್ತಿರುವ ಜನರಿಗೆ ಭಾರತೀಯ ಜನತಾ ಪಕ್ಷದ ಮತ್ತು ಜನಸಂಘದ ಇತಿಹಾಸ ತಿಳಿದಿಲ್ಲ. ತಾಯಿಗಿಂತ ಮಗ ಎಂದೂ ದೊಡ್ಡವನಲ್ಲ. ಹಾಗೆ, ನಾನು ಪಕ್ಷಕ್ಕಿಂತ ಎಂದಿಗೂ ದೊಡ್ಡವನಲ್ಲ ಮತ್ತು ದೊಡ್ಡವನಾಗುವುದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ತಮ್ಮನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ಭಾವುಕರಾಗಿ ಮಾತನಾಡಿದ ಮೋದಿ, ನಾನೆಂದು ಪಕ್ಷಕ್ಕಿಂತ ದೊಡ್ಡವನಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಪಕ್ಷಕ್ಕೆ ತಮ್ಮ ಸ್ವಾಮಿನಿಷ್ಠೆ ತೊರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಮೋದಿ, ಗುಜರಾತಿನಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ಕಾರ್ಯಕರ್ತರ ಕಠಿಣ ಮತ್ತು ಸತತ ಪರಿಶ್ರಮವೆ ಕಾರಣ ಎಂದವರು ತಿಳಿಸಿದರು.

57 ವರ್ಷದ ನರೇಂದ್ರ ಮೋದಿ ಮಂಗಳವಾರ ಮಧ್ಯಾಹ್ನ 12-30ಕ್ಕೆ ರಾಜಧಾನಿಯ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ರಾಜ್ಯಪಾಲ ನವಲ್ ಕಿಶೋರ್ ಶರ್ಮಾ ಅವರಿಂದ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸತತ ಮೂರನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರುವ ಮೂಲಕ ನರೇಂದ್ರ ಮೋದಿ ಬಿಜೆಪಿ ಇತಿಹಾಸದಲ್ಲಿ ನೂತನ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ.
ಮತ್ತಷ್ಟು
ಯುಎನ್‌ಪಿಎಗೆ ಕೃಷಿ ಮುಖ್ಯ ಚುನಾವಣೆ ವಿಷಯ
ರಾಷ್ಟ್ರದ ಚುಕ್ಕಾಣಿ ಕೈಗೆ: ಮಾಯಾವತಿ ಕನಸು
ನರೇಂದ್ರ ಮೋದಿ ನಾಳೆ ಪ್ರಮಾಣವಚನ
ಕೋಮು ಸಿದ್ಧಾಂತದ ವಿರುದ್ಧ ಹೋರಾಟಕ್ಕೆ ಕರೆ
ಗುಜರಾತ್‌ನಲ್ಲಿ ಇಂದು ಶಾಸಕಾಂಗ ಸಭೆ
ಗುಜರಾತ್: ಬಿಜೆಪಿಗೆ ಭರ್ಜರಿ ಗೆಲುವು