ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ಸೋಲಿಗೆ ಸೋನಿಯಾ ಹೊಣೆಯಲ್ಲ: ಕಾಂಗ್ರೆಸ್
ಗುಜರಾತ್ ಅಸೆಂಬ್ಲಿ ಚುನಾವಣೆಗಳಲ್ಲಿ ನಿರೀಕ್ಷೆ ಮೀರಿ ಸೋಲು ಕಂಡಿರುವ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರೆ, ಅದಕ್ಕೆ ಒಂದರ ಬಗ್ಗೆ ಮಾತ್ರ ಖಚಿತ ನಿಲುವಿದೆ. ಅದೆಂದರೆ, ಇಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರದೇನೂ ಪಾತ್ರವಿಲ್ಲ, ಯಾವುದೇ ತಪ್ಪೂ ಇಲ್ಲ.

ಸೋನಿಯಾ ಗಾಂಧಿಯ ಸಮಾವೇಶಗಳಿಗೆ ಮತ್ತು ರಾಹುಲ್ ಗಾಂಧಿಯ ರೋಡ್ ಶೋಗಳಿಗೆ ಬಂದಿದ್ದ ಜನಸಾಗರವೆಲ್ಲವೂ ಮತಗಳಾಗಿ ಪರಿವರ್ತನೆಯಾಗುತ್ತವೆ, ತಮಗೆ ಜಯ ಕಟ್ಟಿಟ್ಟ ಬುತ್ತಿ ಎಂಬ ಆಶಾವಾದವನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ಜನರನ್ನು ಆಕರ್ಷಿಸುವವರು ಮತಗಳನ್ನು ಆಕರ್ಷಿಸುವಲ್ಲಿ ವಿಫಲರಾದರು, ಹೀಗಾಗಿ ಸೋನಿಯಾ ಅವರ ಪಕ್ಷವು ತಪ್ಪು ತನ್ನದೇ, ಸೋನಿಯಾ ಗಾಂಧಿಯದೇನಿಲ್ಲ ಎಂದು ಹೇಳಿಕೊಳ್ಳುತ್ತಿದೆ.

ಜನಸಾಗರವನ್ನು ಮತಗಳಾಗಿ ಪರಿವರ್ತಿಸುವಲ್ಲಿ ನಾವು ಎಡವಿದೆವು. ಆಕೆಯನ್ನೇಕೆ ದೂಷಿಸಬೇಕು ಎಂದು ಗುಜರಾತ್ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರು ಸಿಎನ್ಎನ್ ಐಬಿಎನ್‌ಗೆ ತಿಳಿಸಿದ್ದಾರೆ.
ಮತ್ತಷ್ಟು
ನಾನು ಪಕ್ಷಕ್ಕಿಂತ ದೊಡ್ಡವನಲ್ಲ: ಮೋದಿ
ಯುಎನ್‌ಪಿಎಗೆ ಕೃಷಿ ಮುಖ್ಯ ಚುನಾವಣೆ ವಿಷಯ
ರಾಷ್ಟ್ರದ ಚುಕ್ಕಾಣಿ ಕೈಗೆ: ಮಾಯಾವತಿ ಕನಸು
ನರೇಂದ್ರ ಮೋದಿ ನಾಳೆ ಪ್ರಮಾಣವಚನ
ಕೋಮು ಸಿದ್ಧಾಂತದ ವಿರುದ್ಧ ಹೋರಾಟಕ್ಕೆ ಕರೆ
ಗುಜರಾತ್‌ನಲ್ಲಿ ಇಂದು ಶಾಸಕಾಂಗ ಸಭೆ