ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮಂಗಳವಾರ ತಮ್ಮ 84ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು. ವಾಜಪೇಯಿ ಅವರ ಕೃಷ್ಣಮೆನನ್ ಮಾರ್ಗ್ ನಿವಾಸಕ್ಕೆ ತೆರಳಿದ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರಿಗೆ ಶುಭಾಶಯ ಹೇಳಿದರು. ವಾಜಪೇಯಿ ಅವರ ಅನೇಕ ಮಂದಿ ಅಭಿಮಾನಿಗಳು ಅವರಿಗೆ ಪುಷ್ಪಗುಚ್ಛ ಮತ್ತು ಸಿಹಿಯನ್ನು ನೀಡಿ ಅಭಿನಂದನೆ ಸಲ್ಲಿಸಿದರು.
ಪಕ್ಷದ ಹಿರಿಯ ನಾಯಕ ಆಡ್ವಾಣಿ ಅವರು ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ತೆರಳಬೇಕಿದ್ದರಿಂದ ಸೋಮವಾರ ಸಂಜೆ ವಾಜಪೇಯಿ ಅವರಿಗೆ ಕರೆ ಮಾಡಿ ಶುಭಾಶಯ ಹೇಳಿದರು. ಆಡ್ವಾಣಿ ಅವರು ವಾಜಪೇಯಿ ಅವರ ಉತ್ತರಾಧಿಕಾರಿಯಾಗಿ ನೇಮಕವಾದ ಬಳಿಕ ಇದು ಅವರ ಮೊದಲ ಹುಟ್ಟುಹಬ್ಬವಾಗಿದೆ.
ಬಿಜೆಪಿಯ ಮಾಜಿ ನಾಯಕ ಮದನ್‌ಲಾಲ್ ಖುರಾನಾ ಮತ್ತು ಪ್ಯಾಂಥರ್ಸ್ ಪಕ್ಷದ ಮುಖಂಡ ಭೀಮ್ ಸಿಂಗ್ ಬಿಜೆಪಿಯ ಹಿರಿಯ ನಾಯಕನನ್ನು ಭೇಟಿ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.
|