ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
3 ಉಗ್ರರು ಹತ: ಐವರು ಒತ್ತೆಯಾಳುಗಳ ಬಿಡುಗಡೆ
ಜಮ್ಮುಕಾಶ್ಮೀರದ ಕುಲಗಾಂ ಜಿಲ್ಲೆಯ ಮಸೀದಿಯೊಂದರೊಳಗೆ ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು ಸೆರೆಯಾಳಾಗಿದ್ದ ಎಲ್ಲ ಐವರು ನಾಗರಿಕರನ್ನು ಸೋಮವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ. ಈ ಘಟನೆಯಲ್ಲಿ ಮೂವರು ಉಗ್ರಗಾಮಿಗಳು ಹತರಾಗಿದ್ದು, 24 ಗಂಟೆಗಳ ಒತ್ತೆಯಾಳು ಬಿಕ್ಕಟ್ಟಿಗೆ ತೆರೆಬಿದ್ದಿದೆ.

ಭದ್ರತಾ ಸಿಬ್ಬಂದಿ ಮಸೀದಿಯೊಳಗೆ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದಾಗ ಅಡಗಿದ್ದ ಮೂವರು ಉಗ್ರಗಾಮಿಗಳು ಹೊರಗೆ ಬಂದಕೂಡಲೇ ಗುಂಡಿನ ಕಾಳಗ ನಡೆಯಿತು. ಈ ಕಾಳಗದಲ್ಲಿ ಇಬ್ಬರು ಉಗ್ರಗಾಮಿಗಳು ಮೃತಪಟ್ಟರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನೊಬ್ಬ ಉಗ್ರಗಾಮಿ ತಪ್ಪಿಸಿಕೊಂಡು ಮಸೀದಿಯ ಮಿನಾರೆಟ್ ಒಂದರಲ್ಲಿ ಆಶ್ರಯ ಪಡೆದು ಪೊಲೀಸರ ಜತೆ ಗುಂಡಿನ ಚಕಮಕಿ ನಡೆಸಿದ ಒಂದು ಗಂಟೆಯ ಬಳಿಕ ಅವನೂ ಗುಂಡು ತಾಗಿ ಅಸುನೀಗಿದ. ಎಲ್ಲ ಐವರು ಒತ್ತೆಯಾಳುಗಳು ಸುರಕ್ಷಿತವಾಗಿದ್ದು, ಗುಂಡಿನ ಕಾಳಗದ್ಲಲಿ ಮಸೀದಿಗೆ ಹಾನಿಯಾಗಿಲ್ಲ ಎಂದು ಡಿಐಜಿ ಲೋಹಿಯಾ ತಿಳಿಸಿದ್ದಾರೆ.
ಮತ್ತಷ್ಟು
ವಾಜಪೇಯಿ ಜನ್ಮದಿನ: ಗಣ್ಯರ ಶುಭಾಶಯ
ಗುಜರಾತ್ ಸೋಲಿಗೆ ಸೋನಿಯಾ ಹೊಣೆಯಲ್ಲ: ಕಾಂಗ್ರೆಸ್
ನಾನು ಪಕ್ಷಕ್ಕಿಂತ ದೊಡ್ಡವನಲ್ಲ: ಮೋದಿ
ಯುಎನ್‌ಪಿಎಗೆ ಕೃಷಿ ಮುಖ್ಯ ಚುನಾವಣೆ ವಿಷಯ
ರಾಷ್ಟ್ರದ ಚುಕ್ಕಾಣಿ ಕೈಗೆ: ಮಾಯಾವತಿ ಕನಸು
ನರೇಂದ್ರ ಮೋದಿ ನಾಳೆ ಪ್ರಮಾಣವಚನ