ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ
PTI
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಗೆಲುವನ್ನು ತಂದುಕೊಟ್ಟ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಕಿಕ್ಕಿರಿದ ಜನಸಂದಣಿಯಿಂದ ಕೂಡಿದ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ 57 ವರ್ಷ ಪ್ರಾಯದ ಮೋದಿ ಅವರಿಗೆ ಗುಜರಾತಿನ ರಾಜ್ಯಪಾಲ ನವಲ್ ಕಿಶೋರ್ ಶರ್ಮಾ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ಕಂದು ಬಣ್ಣದ ಕುರ್ತಾ ಮತ್ತು ಕೇಸರಿ ಶಾಲ್ ಧರಿಸಿದ್ದ ಮೋದಿ ದೇವರ ಹೆಸರಿನಲ್ಲಿ ಗುಜರಾತಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭವು ಬಿಜೆಪಿಯ ಹಿರಿಯ ನಾಯಕ ವಾಜಪೇಯಿ ಅವರ ಹುಟ್ಟುಹಬ್ಬದ ದಿನದಂದೇ ನಡೆದಿದ್ದು, ಮೋದಿ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ಪ್ರಧಾನಮಂತ್ರಿ ಸ್ಥಾನಕ್ಕೆ ಹೆಸರಿಸಿದ ಆಡ್ವಾಣಿ ಮತ್ತು ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಸೇರಿದಂತೆ ಬಿಜೆಪಿ ನಾಯಕರ ದಂಡೇ ಸಮಾರಂಭದಲ್ಲಿ ಸೇರಿದ್ದರು.

ಮಾಜಿ ಉಪಾಧ್ಯಕ್ಷ ಭೈರೋನ್ ಸಿಂಗ್ ಶೆಖಾವತ್, ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ ಜೋಷಿ, ವೆಂಕಯ್ಯ ನಾಯ್ಡು ಮತ್ತು ಅರುಣ್ ಜೇಟ್ಲಿ ಜತೆಗೆ ಬಿಜೆಪಿ ಆಳ್ವಿಕೆಯ ಮುಖ್ಯಮಂತ್ರಿಗಳಾದ ವಸುಂಧರಾ ರಾಜೆ(ರಾಜಸ್ತಾನ), ಶಿವರಾಜ್ ಸಿಂಗ್ ಚೌಹಾನ್‌(ಮಧ್ಯಪ್ರದೇಶ), ರಾಮನ್ ಸಿಂಗ್(ಚತ್ತೀಸ್‍ಗಢ) ಮತ್ತು ಬಿ.ಸಿ. ಖಂಡೂರಿ(ಉತ್ತರಖಂಡ) ಹಾಜರಿದ್ದವರಲ್ಲಿ ಪ್ರಮುಖರು.
ಮತ್ತಷ್ಟು
3 ಉಗ್ರರು ಹತ: ಐವರು ಒತ್ತೆಯಾಳುಗಳ ಬಿಡುಗಡೆ
ವಾಜಪೇಯಿ ಜನ್ಮದಿನ: ಗಣ್ಯರ ಶುಭಾಶಯ
ಗುಜರಾತ್ ಸೋಲಿಗೆ ಸೋನಿಯಾ ಹೊಣೆಯಲ್ಲ: ಕಾಂಗ್ರೆಸ್
ನಾನು ಪಕ್ಷಕ್ಕಿಂತ ದೊಡ್ಡವನಲ್ಲ: ಮೋದಿ
ಯುಎನ್‌ಪಿಎಗೆ ಕೃಷಿ ಮುಖ್ಯ ಚುನಾವಣೆ ವಿಷಯ
ರಾಷ್ಟ್ರದ ಚುಕ್ಕಾಣಿ ಕೈಗೆ: ಮಾಯಾವತಿ ಕನಸು