ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಭ್ರಮ, ಸಡಗರದಿಂದ ಕ್ರಿಸ್‌ಮಸ್ ಆಚರಣೆ
WD
ಕ್ರಿಸ್‌ಮಸ್ ಹಬ್ಬವನ್ನು ಮಂಗಳವಾರ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆಗಳು ಎಲ್ಲ ಚರ್ಚ್‌ಗಳಲ್ಲಿ ನಡೆದವು. ಯೂರೋಪಿನ ಕೆಲವು ಗಣ್ಯರ ಸಮ್ಮುಖದಲ್ಲಿ ಗೋವಾದಲ್ಲಿ ಮಧ್ಯರಾತ್ರಿ ಕಳೆಯುವುದಕ್ಕೆ ಸ್ವಲ್ಪ ಮುಂಚೆ ಕ್ರಿಸ್‌ಮಸ್ ಆಚರಣೆ ಆರಂಭವಾಯಿತು. ನಮಸ್ತೆ ಇಂಡಿಯ ಕಾರ್ಯಕ್ರಮವನ್ನು ಹೊಟೆಲೊಂದರಲ್ಲಿ ಆಯೋಜಿಸಲಾಗಿತ್ತು.

ಸಾಂಟಾ ಕ್ಲಾಸ್ ಉಡುಪು ಧರಿಸಿದ ವ್ಯಕ್ತಿಯೊಬ್ಬ ಸ್ಥಳಕ್ಕೆ ಪಲ್ಲಕಿಯಲ್ಲಿ ಆಗಮಿಸಿದರು. ಏಸುಕ್ರಿಸ್ತನ ಜನನವನ್ನು ಬಿಂಬಿಸುವ ಚಿತ್ರಗಳನ್ನು ಮನೆಮನೆಯಲ್ಲೂ ಸ್ಥಾಪಿಸಲಾಗಿತ್ತು. ದೆಹಲಿಯಲ್ಲಿ ಸಾಂಟಾ ಕ್ಲಾಸ್ ಉಡುಪು ಧರಿಸಿದ ವ್ಯಕ್ತಿಯೊಬ್ಬರು ರಥವೊಂದನ್ನು ಏರಿ ಮಕ್ಕಳ ಜತೆ ಭಾಂಗ್ರಾ ನೃತ್ಯ ಮಾಡಿ ಹರ್ಷಿಸಿದರು.

ಕೆಲವು ಮಕ್ಕಳು ಕೂಡ ಸಾಂಟಾ ಕ್ಲಾಸ್ ಉಡುಪಿನಲ್ಲಿ ಜಿಂಗಲ್ ಬೆಲ್ಸ್ ಸಂಗೀತಕ್ಕೆ ನರ್ತಿಸಿ ನಲಿದಾಡಿದರು. ಮರಳು ಕಲಾವಿದ ಸುದರ್ಶನ್ ಪಾಟ್ನಾಯಕ್ ಪುರಿ ಕಡಲಕಿನಾರೆಯಲ್ಲಿ ಏಸುಕ್ರಿಸ್ತನ ಬೃಹತ್ ಮರಳಿನ ಮೂರ್ತಿಯನ್ನು ನಿರ್ಮಿಸಿದರು.

ಕಳೆದ ವರ್ಷ ನಾವು ಸಾಂಟಾ ಕ್ಲಾಸ್ ಪ್ರತಿಮೆಯನ್ನು ನಿರ್ಮಿಸಿದ್ದೆವು, ಈ ವರ್ಷ ಇನ್ನೂ ದೊಡ್ಡ ಪ್ರತಿಮೆ ನಿರ್ಮಿಸುವ ಗುರಿಯಿಂದ 22 ಅಡಿ ಉದ್ದದ ಏಸುಕ್ರಿಸ್ತನ ಪ್ರತಿಮೆ ನಿರ್ಮಿಸಿದೆವು. ಈ ಮೂರ್ತಿಯನ್ನು ಸ್ಥಾಪಿಸಲು 600 ಟನ್ ಮರಳು ಬೇಕಾಯಿತು ಎಂದು ಪಾಟ್ನಾಯಕ್ ಹೇಳಿದರು. ಈಶಾನ್ಯ ರಾಜ್ಯಗಳಲ್ಲಿ ಕೂಡ ಕ್ರಿಸ್‌ಮಸ್ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು.
ಮತ್ತಷ್ಟು
ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ
3 ಉಗ್ರರು ಹತ: ಐವರು ಒತ್ತೆಯಾಳುಗಳ ಬಿಡುಗಡೆ
ವಾಜಪೇಯಿ ಜನ್ಮದಿನ: ಗಣ್ಯರ ಶುಭಾಶಯ
ಗುಜರಾತ್ ಸೋಲಿಗೆ ಸೋನಿಯಾ ಹೊಣೆಯಲ್ಲ: ಕಾಂಗ್ರೆಸ್
ನಾನು ಪಕ್ಷಕ್ಕಿಂತ ದೊಡ್ಡವನಲ್ಲ: ಮೋದಿ
ಯುಎನ್‌ಪಿಎಗೆ ಕೃಷಿ ಮುಖ್ಯ ಚುನಾವಣೆ ವಿಷಯ