ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಕ್ಕಳ ದುರ್ಬಬಳಕೆ: ಸಚಿವರ ಸೋದರ ತಪ್ಪಿತಸ್ಥ
ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರ ಮಾಲೀಕತ್ವದ ಜಮೀನಿನಲ್ಲಿ ಉಳುಮೆಗೆ ಮಕ್ಕಳನ್ನು ಅಕ್ರಮವಾಗಿ ಬಳಸಿಕೊಂಡ ಆರೋಪದ ಮೇಲೆ ಸಚಿವರ ಸೋದರನನ್ನು ತಪ್ಪಿತಸ್ಥನನ್ನಾಗಿ ಮಾಡಲಾಗಿದೆ. ಕೆಲವು ವಾರಗಳ ಕೆಳಗೆ ಟಿವಿ ಚಾನೆಲ್‌ವೊಂದರಲ್ಲಿ ಮಕ್ಕಳನ್ನು ಅಕ್ರಮವಾಗಿ ಉಳುಮೆಗೆ ಬಳಸಿಕೊಂಡ ಬಗ್ಗೆ ಪ್ರಸಾರ ಮಾಡಲಾಗಿತ್ತು. ಸಚಿವರು ಈ ಆರೋಪವನ್ನು ಅಲ್ಲಗಳೆದಿದ್ದರೂ, ವೈಶಾಲಿ ಜಿಲ್ಲೆಯಲ್ಲಿ ಜಮೀನನ್ನು ಉಳಲು ನೇಗಿಲಿನ ಬದಲಿಗೆ ಮಕ್ಕಳನ್ನು ಬಳಸಿಕೊಂಡಿದ್ದನ್ನು ವಿಡಿಯೊ ಚಿತ್ರಗಳು ರುಜುವಾತು ಮಾಡಿವೆ.

ಮಕ್ಕಳನ್ನು ಜಮೀನು ಉಳುಮೆಗೆ ರಘುವಂಶ ಪ್ರಸಾದ್ ಸಿಂಗ್ ಅವರ ಸೋದರ ರಘುರಾಜ್ ಬಳಸಿಕೊಂಡಿದ್ದು. ಈಗ ಅವರು ತೊಂದರೆಗೆ ಸಿಕ್ಕಿಕೊಂಡಿದ್ದಾರೆ. . ಬಿಹಾರದ ಕಾರ್ಮಿಕ ಆಯುಕ್ತರು ಸಚಿವರ ಸೋದರನು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ತಪ್ಪಿತಸ್ಥರನ್ನಾಗಿಸಿದೆ.

ನಾವು ಇಡೀ ವರದಿಯನ್ನು ಅಡ್ವೋಕೇಟ್ ಜನರಲ್ ಅವರಿಗೆ ಕಳಿಸಿದ್ದು, ಅವರು ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಯಾವ ನಿಯಮಗಳಡಿ ಕಾನೂನು ಕ್ರಮ ಕೈಗೊಳ್ಳಬಹುದೆಂದು ತೀರ್ಮಾನಿಸುತ್ತಾರೆಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ. ತಮ್ಮ ಸೋದರನ ವಿರುದ್ಧ ಕ್ರಮದಿಂದ ರಘುವಂಶ ಪ್ರಸಾದ್ ಸಿಂಗ್ ಅವರು ಮುಖಭಂಗ ಅನುಭವಿಸುವಂತಾಗಿದೆ.

ಮೊದಲಿಗೆ ವರದಿ ಪ್ರಸಾರವಾದಾಗ ತಮಗೆ ಕಳಂಕ ತರಲು ಮಾಧ್ಯಮದ ಒಳಸಂಚು ಎಂದು ಸಚಿವರು ಟೀಕಿಸಿದ್ದರು. ಟಿವಿ ಸಿಬ್ಬಂದಿ ಮಕ್ಕಳಿಗೆ ಹಣ ನೀಡಿ ಇಡೀ ನಕಲಿ ಕಥೆಯನ್ನು ಸೃಷ್ಟಿಸಿದ್ದಾರೆಂದು ಕೂಡ ಆರೋಪ ಹೊರಿಸಲಾಗಿತ್ತು. ಆದರೆ ರಾಜ್ಯದ ಕಾರ್ಮಿಕ ಆಯೋಗದ ವರದಿ ಇವೆಲ್ಲ ಆರೋಪಗಳಿಗೆ ತೆರೆಎಳೆದಿದೆ. ಕಾರ್ಮಿಕ ಇಲಾಖೆ ಮತ್ತಿತರ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಮೀನನ್ನು ಉಳಲು ಮಕ್ಕಳನ್ನು ಬಹಳ ವರ್ಷಗಳಿಂದ ಬಳಸುತ್ತಿದ್ದರೆಂದು ದೃಢಪಡಿಸಿದೆಯೆಂದು ಮೋದಿ ಹೇಳಿದರು.
ಮತ್ತಷ್ಟು
ಸಂಭ್ರಮ, ಸಡಗರದಿಂದ ಕ್ರಿಸ್‌ಮಸ್ ಆಚರಣೆ
ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ
3 ಉಗ್ರರು ಹತ: ಐವರು ಒತ್ತೆಯಾಳುಗಳ ಬಿಡುಗಡೆ
ವಾಜಪೇಯಿ ಜನ್ಮದಿನ: ಗಣ್ಯರ ಶುಭಾಶಯ
ಗುಜರಾತ್ ಸೋಲಿಗೆ ಸೋನಿಯಾ ಹೊಣೆಯಲ್ಲ: ಕಾಂಗ್ರೆಸ್
ನಾನು ಪಕ್ಷಕ್ಕಿಂತ ದೊಡ್ಡವನಲ್ಲ: ಮೋದಿ