ತಮಿಳುನಾಡು ನಾಗಪಟ್ಟಿಣಂ ಜಿಲ್ಲೆಯ ರೈತರು ಸುನಾಮಿ ಅಲೆ ಅಪ್ಪಳಿಸಿದ ಬಳಿಕ ತೆಗೆದುಕೊಂಡ ಬ್ಯಾಂಕ್ ಸಾಲವನ್ನು ತೀರಿಸಲು ಮೂರು ವರ್ಷಗಳು ಕಳೆದಿದ್ದರೂ ಹೆಣಗಾಡುತ್ತಿರುವ ಸಂಗತಿ ವರದಿಯಾಗಿದೆ. ತಮ್ಮ ದೋಣಿಗಳನ್ನು ಮೀನುಗಾರಿಕೆಗೆ ಒಯ್ಯುವ ಸಲುವಾಗಿ ತಮಿಳುನಾಡು ಸರ್ಕಾರವು ಸಬ್ಸಿಡಿ ದರಗಳಲ್ಲಿ ಪ್ರತಿ ತಿಂಗಳು 1,500 ಲೀಟರ್ ಡೀಸೆಲ್ ಒದಗಿಸುತ್ತದೆಂದು ಮೀನುಗಾರರು ಹೇಳಿದರು.ಆದರೆ ಡೀಸೆಲ್ ದರಗಳ ಹೆಚ್ಚಳವು ತಮಗೆ ಹೊರೆಯಾಗಿದೆ ಎಂದು ಅವರು ಹೇಳಿದ್ದಾರೆ.
ಡೀಸೆಲ್ ದರಗಳ ಹೆಚ್ಚಳದಿಂದ ಗಳಿಕೆಯ ಪ್ರಮಾಣವು ಬಡ ರೈತರಲ್ಲಿ ಕುಸಿದಿದೆ. ಸುನಾಮಿ ಅಪ್ಪಳಿಸಿದಾಗ ತೆಗೆದುಕೊಂಡ ಬ್ಯಾಂಕ್ ಸಾಲವನ್ನು ನಾವು ಇನ್ನೂ ತೀರಿಸಲು ಸಾಧ್ಯವಾಗಿಲ್ಲ. ನಾವು ಸದಾ ಭಯದ ನೆರಳಲ್ಲಿ ಬದುಕು ಸಾಗಿಸಿದ್ದು. ಪುನಃ ಸುನಾಮಿ ಅಪ್ಪಳಿಸಿದರೆ ಏನು ಗತಿ ಎಂದು ಮೀನುಗಾರ ಬಾಲು ಪ್ರಶ್ನಿಸುತ್ತಾರೆ.
ಸಬ್ಸಿಡಿ ದರದ ಡೀಸೆಲ್ ಕೋಟಾವನ್ನು ದುಪ್ಪಟ್ಟು ನೀಡುವಂತೆ ಮೀನುಗಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ನಮಗೆ ಕನಿಷ್ಠ ತಿಂಗಳಿಗೆ 3000 ಲೀಟರ್ ಡೀಸೆಲ್ ನೀಡಿದರೆ ನಾವು ಸಮುದ್ರದಲ್ಲಿ ಇನ್ನಷ್ಟು ದೂರ ತೆರಳಲು ಸಾಧ್ಯವಾಗುತ್ತದೆ ಮತ್ತು ಬ್ಯಾಂಕ್ ಸಾಲ ತೀರಿಸಲು ಸಾದ್ಯವಾಗುತ್ತದೆ ಎಂದು ಮೀನುಗಾರ ತಶೀನ ಮೂರ್ತಿ ಹೇಳಿದ್ದಾರೆ.
|