ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭೂಸ್ವಾಧೀನ ವಿರೋಧಿಗಳು ಮಿತಿ ಅರಿಯಲು ಕರೆ
PTI
ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನವನ್ನು ವಿರೋಧಿಸುವವರು ತಮ್ಮ ಮಿತಿಯನ್ನು ಅರಿತುಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಮಂಗಳವಾರ ತಿಳಿಸಿದ್ದಾರೆ. ಭೂಸ್ವಾಧೀನವನ್ನು ವಿರೋಧಿಸುವವರು ಅದನ್ನು ಯಾವಾಗ ವಿರೋಧಿಸಬೇಕು ಅಥವಾ ಯಾವಾಗ ವಿರೋಧಿಸಬಾರದೆಂಬ ಮಿತಿಯನ್ನು ಅರಿತಿರಬೇಕು ಎಂದು ಮುಖರ್ಜಿ ಕುಲ್ಟಿಯಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.

ಭೂಸ್ವಾಧೀನ ಅಗತ್ಯವಾದ ಕೈಗಾರಿಕೆ ಅಭಿವೃದ್ಧಿ ವಿಷಯದ ಬಗ್ಗೆ ಸಹನೆಯಿಂದ ಇರುವಂತೆ ಅವರು ಜನರನ್ನು ಒತ್ತಾಯಿಸಿದರು. ಪಶ್ಚಿಮಬಂಗಾಳದಲ್ಲಿ ರೈತರ ಭೂಸ್ವಾಧೀನ ವಿವಾದವು ಹಿಂಸಾಸ್ವರೂಪವನ್ನು ತಾಳಿತು.. ಪ್ರತಿಪಕ್ಷ ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲಿ ರೈತರು ಮತ್ತು ಸಾಮಾಜಿಕ ಕಾರ್ಯಕರ್ತರಿಂದ ರಾಜ್ಯಸರ್ಕಾರವು ಹಿಂಸಾತ್ಮಕ ಪ್ರತಿಭಟನೆಗಳನ್ನು ಎದುರಿಸಿತು.

ನಂದಿಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಸಲುವಾಗಿ ಭೂಸ್ವಾಧೀನವನ್ನು ವಿರೋಧಿಸಿ ರೈತರ ಪ್ರತಿಭಟನೆ ಹಿಂಸಾ ಸ್ವರೂಪ ತಾಳಿದ ಬಳಿಕ ಪೊಲೀಸರು ಗೋಳಿಬಾರ್ ಮಾಡಿ ಅನೇಕ ಮಂದಿ ಸಾವಪ್ಪಿದ್ದರು. ಇದೇರೀತಿಯ ಪರಿಸ್ಥಿತಿ ಸಿಂಗುರ್‌ನಲ್ಲಿ ಕೂಡ ಉದ್ಭವಿಸಿದ್ದು, ಕಾರ್ ಕಾರ್ಖಾನೆ ಸ್ಥಾಪನೆಗೆ ಭೂಸ್ವಾಧೀನವನ್ನು ರೈತರು ವಿರೋಧಿಸುತ್ತಿದ್ದಾರೆ.
ಮತ್ತಷ್ಟು
ಬ್ಯಾಂಕ್ ಸಾಲ ತೀರಿಸಲು ಮೀನುಗಾರರ ಹೆಣಗಾಟ
ಗಿನ್ನಿಸ್ ದಾಖಲೆ ಸೇರಿದ ದೆಹಲಿ ಅಕ್ಷರ ಧಾಮ
ತಸ್ಲೀಮಾ ಇಷ್ಟಪಟ್ಟರೆ ವಾಪಸಾಗಬಹುದು:ಬಸು
ಮಕ್ಕಳ ದುರ್ಬಬಳಕೆ: ಸಚಿವರ ಸೋದರ ತಪ್ಪಿತಸ್ಥ
ಸಂಭ್ರಮ, ಸಡಗರದಿಂದ ಕ್ರಿಸ್‌ಮಸ್ ಆಚರಣೆ
ಮೋದಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ