ನಂದಿಗ್ರಾಮದಲ್ಲಿ ಭುಗಿಲೆದ್ದ ಹಿಂಸಾಚಾರದ ಘಟನೆಯಲ್ಲಿ ಸಂಭವಿಸಿದ ಸಾವುನೋವಿನ ಬಗ್ಗೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಯಾವುದೇ ನಾಗರಿಕ ರಾಷ್ಟ್ರದ ಸರ್ಕಾರ ಜನರನ್ನು ಕೊಲ್ಲಲು ಪೊಲೀಸರನ್ನು ಕಳಿಸುವುದಿಲ್ಲ ಎಂದು ಹೇಳಿದ ಅವರು, ನಿವಾಸಿಗಳ ತೊಂದರೆಗಳಿಗೆ ಸಾಂತ್ವನ ನುಡಿಯಲು ಪ್ರಯತ್ನಿಸಿ ಅವರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಹಿಂಸಾಚಾರದಲ್ಲಿ ಸತ್ತವರ ಬಂಧುಗಳಿಗೆ ಪರಿಹಾರವನ್ನು ಅವರು ಘೋಷಿಸಿದರು. ಸಿಪಿಎಂ ಕಾರ್ಯಕರ್ತರು ಮತ್ತು ಸ್ಥಳೀಯರ ನಡುವೆ ಕಳೆದ ಮಾರ್ಚ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ನಂದಿಗ್ರಾಮಕ್ಕೆ ಚೊಚ್ಚಲ ಭೇಟಿ ನೀಡುತ್ತಿರುವ ಅವರು, ಜೀವ ತೆತ್ತವರಿಗಾಗಿ ಸಂತಾಪ ವ್ಯಕ್ತಪಡಿಸಿದರು.
ಆದರೆ ಅವರ ಭೇಟಿಯನ್ನು ಸ್ಥಳೀಯರು ವಿರೋಧಿಸುತ್ತಿದ್ದು, ಕಪ್ಪು ಬಾವುಟ ಪ್ರದರ್ಶನ, ಸಾಮೂಹಿಕ ನಿರಶನ ಮತ್ತು ಅವರ ನಿರ್ಗಮನದ ಬಳಿಕ ಮನೆಗಳನ್ನು ಸ್ವಚ್ಛಗೊಳಿಸುವ ಕ್ರಿಯೆಯನ್ನು ಆಚರಿಸಲಿದ್ದಾರೆ. ನಂದಿಗ್ರಾಮದಲ್ಲಿ ಭೂಸ್ವಾಧೀನ ವಿರೋಧಿ ಆಂದೋಳನವನ್ನು ಹುಟ್ಟುಹಾಕಿರುವ ಭೂಮಿ ಉಚ್ಛೇದ್ ಪ್ರತಿರೋಧ ಸಮಿತಿಯು ಈ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
|