ನಂದಿಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಐ ಮತ್ತು ಸಿಐರ್‌ಪಿಎಫ್‌ನಲ್ಲಿ ಎಡ ರಂಗ ಸರಕಾರದ ಮಧ್ಯಪ್ರವೇಶವನ್ನು ಆರೋಪಿಸಿ, ಕೇಂದ್ರವು ಸಂವಿಧಾನದ 355ನೇ ವಿಧಿ ಜಾರಿಗೊಳಿಸಿ ರಾಜ್ಯವನ್ನು ಆಂತರಿಕ ಗೊಂದಲದಿಂದ ರಾಜ್ಯವನ್ನು ರಕ್ಷಿಸಬೇಕೆಂದು ಬಿಜೆಪಿ ಕೇಂದ್ರಕ್ಕೆ ಮನವಿ ಮಾಡಿದೆ.
ಪಶ್ಚಿಮ ಬಂಗಾಳ ಸರಕಾರವು ಸಿಬಿಐ ಮತ್ತು ಸಿಆರ್‌ಪಿಎಫಿನ್ನು ನಿಷ್ಫಲಗೊಳಿಸಲು ಮತ್ತು ನಿಸ್ಸತ್ವಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪಕ್ಷವು ಆರೋಪಿಸಿದ್ದು, ಬುದ್ಧದೇವ್ ಭಟ್ಟಾಚಾರ್ಯ ಅಧಿಕಾರಕ್ಕೆ ಕಡಿವಾಣ ಹಾಕಲಲು ಕೇಂದ್ರವು ಸಂವಿಧಾನ 355ನೇ ವಿಧಿ ಬಳಸಬೇಕೆಂದು ಒತ್ತಾಯಿಸಿದೆ.
ರಾಜ್ಯವನ್ನು ಬಾಹ್ಯ ಆಕ್ರಮಣ ಮತ್ತು ಆಂತರಿಕ ತೊಂದರೆಗಳಿಂದ ರಕ್ಷಿಸಲು ಮತ್ತು ಎಲ್ಲಾ ರಾಜ್ಯದ ಸರಕಾರಗಳು ಸಂವಿಧಾನಬದ್ಧವಾಗಿ ಮುಂದುವರಿಯುತ್ತವೆ ಎಂಬುದನ್ನು ಖಚಿತಪಡಿಸಲು 355ನೇ ಕಾಯ್ದೆಯನ್ನು ತುರ್ತು ನಿಬಂಧನೆಯಾಗಿ ವಿರಳವಾಗಿ ಉಪಯೋಗಿಸಲಾಗುತ್ತದೆ
ಹಿಂಸಾಪೀಡಿತ ನಂದಿಗ್ರಾಮದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ನಿಯೋಗಕ್ಕೆ ಸರಿಯಾಗಿ ಸಹಕಾರ ನೀಡಲು ಪಶ್ಚಿಮ ಬಂಗಾಳ ಪೊಲೀಸ್ ಮತ್ತು ರಾಜ್ಯ ಆಡಳಿತವು ನಿರಾಕರಿಸುತ್ತಿದೆ ಎಂದು ಬಿಜೆಪಿ ಆಪಾದಿಸಿದೆ.
|