ವಿವಾದಾತ್ಮಕ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಅವರಿಗೆ ವಾಕ್ ಸ್ವಾತಂತ್ರ್ಯ ಮತ್ತು ಭದ್ರತೆ ನೀಡುವಂತೆ ಲೇಖಕರು ಆಗ್ರಹಿಸಿದ್ದಾರೆ. ಸರ್ಕಾರ ತಸ್ಲೀಮಾ ಅವರಿಗೆ ಸೂಕ್ತ ಭದ್ರತೆ ನೀಡದಿದ್ದರೆ ಅದು ನಿಜವಾಗಲೂ ನಾಚಿಕೆಗೇಡು. ಉಳಿದ ಪ್ರಕರಣಗಳಲ್ಲಿ ರಾಜ್ಯಸರ್ಕಾರವು ಭದ್ರತೆ ನೀಡುತ್ತಿರುವಾಗ ಈ ಪ್ರಕರಣದಲ್ಲಿ ಭದ್ರತೆ ಏಕೆ ನೀಡಬಾರದು ಎಂದು ಲೇಖಕ ನವಿವರ್ ಸಿಂಗ್ ಪ್ರಶ್ನಿಸಿದ್ದಾರೆ.
ತಸ್ಲೀಮಾ ಅವರಿಗೆ ಮಾನಸಿಕ ಯಾತನೆ ತಪ್ಪಿಸಲು ಮೊದಲಿಗೆ ಜನರ ಭೇಟಿಗೆ ಮುಕ್ತವಾಗಿ ಅವರನ್ನು ಬಿಡಬೇಕು. ಗೃಹ ಬಂಧನವು ತಸ್ಲೀಮಾಗೆ ನೀಡಿರುವ ಭದ್ರತೆಯಾಗಿದ್ದರೆ ಅದೇ ರೀತಿಯ ಭದ್ರತೆಯನ್ನು ಕೋಲ್ಕತಾದಲ್ಲಿ ಕೂಡ ನೀಡುವುದರಲ್ಲಿ ಅರ್ಥವಿಲ್ಲ ಎಂದು ಇನ್ನೊಬ್ಬ ಲೇಖಕರಾದ ರಾಜೇಂದ್ರ ಯಾದವ್ ಹೇಳಿದ್ದಾರೆ.
ತಸ್ಲೀಮಾ ಅವರಿಗೆ ಕೇಂದ್ರ ಸರ್ಕಾರ ರಕ್ಷಣೆ ನೀಡುವುದಾದರೆ ಅವರನ್ನು ಕೋಲ್ಕತಾಗೆ ಸ್ವಾಗತಿಸುವುದಾಗಿ ಸಿಪಿಎಂ ನಾಯಕ ಜ್ಯೋತಿ ಬಸು ಮಂಗಳವಾರ ತಿಳಿಸಿದ್ದರು. ತಸ್ಲೀಮಾ ಅವರನ್ನು ಪ್ರಸಕ್ತ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದ್ದು. ಕೋಲ್ಕತಾಗೆ ಹಿಂತಿರುಗಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು.
ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅದನ್ನು ಅಲ್ಲಗಳೆದು ತಸ್ಲೀಮಾ ಅವರನ್ನು ಗೃಹಬಂಧನದಲ್ಲಿ ಇರಿಸಿರುವ ವರದಿಯನ್ನು ನಿರಾಕರಿಸಿದ್ದಾರೆ.
|