ಪ್ರಸಿದ್ಧ ಶಬರಿಮಲೆ ದೇವಸ್ತಾನದಲ್ಲಿ ಮಂಡಲಪೂಜೆ ಪ್ರಯುಕ್ತ ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಅಯ್ಯಪ್ಪ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಎರಡು ತಿಂಗಳ ಯಾತ್ರೆಯ ಮೊದಲ ಹಂತ ಮುಕ್ತಾಯವಾಗಿದೆ.
ಅಯ್ಯಪ್ಪ ದೇವರ ವಿಗ್ರಹಕ್ಕೆ 426 ಸವರನ್‌ಗಳ ಸುವರ್ಣ ಉಡುಪಾದ "ತಂಕ ಅಂಗಿ"ಯಿಂದ ಅಲಂಕರಿಸಲಾಗುವುದು. ದೇವಸ್ಥಾನದ ಮುಖ್ಯ ಅರ್ಚಕ ಟಿ.ಕೆ. ಕೃಷ್ಣನ್ ನಂಬೂದಿರಿ ಮಂಡಲ ಪೂಜೆಯನ್ನು ನೆರವೇರಿಸಿದರು.
ಸನ್ನಿಧಾನಂ ಸಂಕೀರ್ಣ ಮತ್ತು ಪಂಪಾದಲ್ಲಿ ಭಕ್ತರ ಗುಂಪನ್ನು ನಿಯಂತ್ರಿಸಲು ಪೊಲೀಸರು ತೀವ್ರವಾಗಿ ಶ್ರಮಿಸಿದರು. ದೇವಸ್ಥಾನವನ್ನು ಇಂದು ಮುಚ್ಚಿದ ಬಳಿಕ ಡಿ.30ರಂದು ಮಕರವಿಳಕ್ಕು ಉತ್ಸವಕ್ಕೆ ತೆರೆಯಲಾಗುವುದು.
|