ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೈದ್ಯರ ಹತ್ಯೆ: ತಾಯಿ, ಮಗಳಿಗೆ ಗಲ್ಲು
ಡಾ.ದೀಪಕ್ ಮಹಾಜನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಲೀನಾ ಮತ್ತು ದೀಪ್ತಿ ದಿಯೋಸ್ತಲೆಗೆ ಪುಣೆಯ ಜಿಲ್ಲಾ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಗುರುವಾರ ವಿಧಿಸಿದೆ. ಈ ಹತ್ಯೆ ಪ್ರಕರಣವು ಕಳೆದ ವರ್ಷ ನಡೆದಿದ್ದು, 2006 ಜು.2ರಂದು ವೈಸಿಎಂ ಆಸ್ಪತ್ರೆಯ ವೈದ್ಯರಾದ ದೀಪಕ್ ಮಹಾಜನ್ ಅವರಿಗೆ ಮತ್ತುಬರಿಸುವ ಚುಚ್ಚುಮದ್ದು ನೀಡಿ ಅಪಹರಿಸಿದ ಬಳಿಕ ತಾಯಿ, ಪುತ್ರಿದ್ವಯರು ಹತ್ಯೆ ಮಾಡಿದ್ದರು.

ಹತ್ಯೆಮಾಡಿದ ಬಳಿಕ ಅವರಿಬ್ಬರು ಮಹಾಜನ್ ಅವರ ದೇಹವನ್ನು ಚೂರು ಚೂರು ಮಾಡಿ ದೇಹದ ಭಾಗಗಳನ್ನು ಕಟರಾಜ್ ಘಾಟ್ ಮತ್ತು ನಾಸಿಕ್ ರಸ್ತೆ ಪ್ರದೇಶದ ನಿರ್ಜನ ಸ್ಥಳದಲ್ಲಿ ಎಸೆದಿದ್ದರು. ಪ್ರಾಸಿಕ್ಯೂಷನ್ 47 ಸಾಕ್ಷಿಗಳ ವಿಚಾರಣೆ ಮಾಡಿದ್ದರೆ, ಪೊಲೀಸರು ಸಾಕ್ಷ್ಯಾಧಾರದ 200 ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇಂತಹ ಹೇಯ ಕೃತ್ಯವನ್ನು ಎಸಗಿದ ದುಷ್ಕರ್ಮಿಗಳ ನಿವಾಸದಿಂದ 181 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಮೇಲೆ ಪಾಲಿಗ್ರಾಫ್ ಪರೀಕ್ಷೆಗಳನ್ನು ಕೂಡ ಮಾಡಲಾಗಿದ್ದು, ಪುತ್ರಿ ಲೀನಾ ಪರೀಕ್ಷೆಯಲ್ಲಿ ಸುಳ್ಳು ಹೇಳಿದ್ದು ಪತ್ತೆಯಾಗಿತ್ತು. ಮುಂಬೈನ ನಿವಾಸಿಗಳಾದ ಆರೋಪಿಗಳು ವಕೀಲನ ಸೇವೆಯನ್ನು ತೆಗೆದುಕೊಳ್ಳಲು ನಿರಾಕರಿಸಿ ಈ ಪ್ರಕರಣದಲ್ಲಿ ಸ್ವತಃ ವಾದವನ್ನು ಮಂಡಿಸಿದ್ದರು ಮತ್ತು ಸಾಕ್ಷಿಗಳ ಪಾಟೀಸವಾಲನ್ನು ಅವರು ಸ್ವತಃ ಮಾಡಿದ್ದರು.
ಮತ್ತಷ್ಟು
ಕೋಮುಸಂಘರ್ಷ: 11 ಚರ್ಚ್‌ಗಳು ಬೆಂಕಿಗಾಹುತಿ
ವಿದರ್ಭದಲ್ಲಿ ಇನ್ನೂ ಐವರು ರೈತರ ಆತ್ಮಹತ್ಯೆ
ಶಬರಿಮಲೆ: ಮಂಡಲಪೂಜೆಗೆ ಸಾವಿರಾರು ಭಕ್ತರು
ತಸ್ಲೀಮಾ ನಸ್ರೀನ್‌ ಭದ್ರತೆಗೆ ಲೇಖಕರ ಆಗ್ರಹ
ಜ.4ರಂದು ಶೌಕತ್ ಗುರು ಅರ್ಜಿ ವಿಚಾರಣೆ
ಪ.ಬಂ.ದಲ್ಲಿ 355 ವಿಧಿ ಜಾರಿಗೆ ಬಿಜೆಪಿ ಒತ್ತಾಯ