ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೇನಜೀರ್ ಸಾವಿಗೆ ಸಿಡಬ್ಲ್ಯುಸಿಯಲ್ಲಿ ಸಂತಾಪ
PTI
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಶುಕ್ರವಾರ ಸಭೆ ಸೇರಿ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ಸಾವಿನ ಬಗ್ಗೆ ಗೊತ್ತುವಳಿ ಅಂಗೀಕರಿಸಿ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದೆ.

ಭರವಸೆಯ ಮತ್ತು ಸಮರ್ಥ ನಾಯಕಿಯ ಜೀವನವನ್ನು ಹೇಯವಾಗಿ ಮೊಟಕುಗೊಳಿಸಿದ ಇಂತಹ ಹೇಡಿತನದ ಕೃತ್ಯವು ನಾಗರಿಕ ಸಮಾಜದಿಂದ ತೀವ್ರ ಖಂಡನೆಗೆ ಅರ್ಹವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ಣಯವನ್ನು ಓದಿ ಹೇಳಿದರು. ಸಿಡಬ್ಲ್ಯುಸಿ ಭುಟ್ಟೊ ಅವರ ಅಕಾಲಿಕ ನಿಧನದ ಬಗ್ಗೆ ತೀವ್ರವಾಗಿ ಶೋಕಿಸಿದ್ದು, ಅವರ ಕುಟುಂಬಕ್ಕೆ, ಪಾಕಿಸ್ತಾನ ಪೀಪಲ್ಸ್ ಪಕ್ಷ ಮತ್ತು ಪಾಕಿಸ್ತಾನದ ಜನತೆಗೆ ಹೃದಯಪೂರ್ವಕ ಸಂತಾಪಗಳನ್ನು ಕಳಿಸಿದೆ.

ವರ್ಚಸ್ವಿ ಮತ್ತು ಜನಪ್ರಿಯ ನಾಯಕಿಯನ್ನು ಇಂತಹ ಗಂಭೀರ ಹಂತದಲ್ಲಿ ಕಳೆದುಕೊಂಡಿದ್ದು, ಪಾಕಿಸ್ತಾನದ ಜನತೆಯ ದುರಂತ. ಬೇನಜೀರ್ ಸಾವು ದಕ್ಷಿಣ ಏಷ್ಯದ ಇಡೀ ಪ್ರದೇಶಕ್ಕೆ ಉಂಟಾದ ನಷ್ಟ ಎಂದು ಸೋನಿಯಾ ಹೇಳಿದರು.

ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆ ಮರುಸ್ಥಾಪನೆಯಲ್ಲಿ ಒಳಗೊಂಡಿದ್ದ ಅಪಾಯದ ಬಗ್ಗೆ ಅವರಿಗೆ ಅರಿವಿದ್ದರೂ ಭುಟ್ಟೊ ಧೈರ್ಯ ಮತ್ತು ವಿಶಿಷ್ಠತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆಂದು ಸಿಡಬ್ಲ್ಯುಸಿ ಅಭಿಪ್ರಾಯಪಟ್ಟಿದೆ. ಧೈರ್ಯ, ಬದ್ಧತೆ ಮತ್ತು ನಿಷ್ಠೆಯಿಂದ ಈ ಉದ್ದೇಶ ಸಾಧನೆಗೆ ತಮ್ಮ ಪ್ರಾಣತ್ಯಾಗ ಮಾಡುವ ಅಪಾಯಕ್ಕೂ ಅವರು ಹಿಂಜರಿಯಲಿಲ್ಲ ಎಂದು ಅದು ತಿಳಿಸಿದೆ.
ಮತ್ತಷ್ಟು
ಹಿಮಾಚಲವೂ ಬಿಜೆಪಿ ತೆಕ್ಕೆಗೆ: ಕಾಂಗ್ರೆಸಿಗೆ ಆಘಾತ
ಭುಟ್ಟೊ ಹತ್ಯೆ ಶಾಂತಿ ಪ್ರಕ್ರಿಯೆಗೆ ಅಡ್ಡಿ
ಭುಟ್ಟೊ ಹತ್ಯೆ: ರಾಷ್ಟ್ರಪತಿ ವಿಷಾಧ
ನುಣುಚಿಕೊಂಡ ಕಾಂಗ್ರೆಸ್ ಪಕ್ಷ: ಕಾರಟ್ ಟೀಕೆ
ಹುಸೇನ್ ಕಲಾಕೃತಿಗಳಿಗೆ ಶಿವಸೇನೆಯಿಂದ ಹಾನಿ
ವೈದ್ಯರ ಹತ್ಯೆ: ತಾಯಿ, ಮಗಳಿಗೆ ಗಲ್ಲು