ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ವೈಫಲ್ಯ: ಬಿಜೆಪಿಗೆ ಮೇಲುಗೈ
ND
ಹಿಮಾಚಲಪ್ರದೇಶ ಮತ್ತು ಗುಜರಾತ್ ಚುನಾವಣೆ ಫಲಿತಾಂಶಗಳಿಂದ ಉತ್ತೇಜಿತವಾದ ಬಿಜೆಪಿ ಶುಕ್ರವಾರ ಅದನ್ನು ಬದಲಾವಣೆಯ ಪ್ರಕ್ರಿಯೆ ಎಂದು ಬಣ್ಣಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಸರ್ವತೋಮುಖ ವೈಫಲ್ಯದಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತ ತಲುಪಿದೆಯೆಂದು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಶುಕ್ರವಾರ ಪ್ರತಿಕ್ರಿಯಿಸಿದರು.

ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶಗಳು ಎಲ್ಲ ರಂಗಗಳಲ್ಲಿ ವಿಫಲವಾದ ಯುಪಿಎ ಸರ್ಕಾರ ಕ್ಷಿಪ್ರಗತಿಯಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿರುವ ದ್ಯೋತಕವಾಗಿದೆ ಎಂದು ಅವರು ನುಡಿದರು. ಇಂತಹ ಕಾರ್ಯಸ್ಥಗಿತ ಸರ್ಕಾರದಿಂದ ಭಾರತದ ಜನತೆ ವಿಮೋಚನೆ ಬಯಸಿದೆ ಎಂದು ನುಡಿದ ಅವರು ಇದು ಸಮ್ಮಿಶ್ರ ಕೂಟದ ಬದಲಿಗೆ ವೈರುಧ್ಯಗಳ ಮೂಟೆಯಾಗಿದೆ ಎಂದು ಬಣ್ಣಿಸಿದರು.

2007ರ ಬಿಜೆಪಿ ಕಾರ್ಯನಿರ್ವಹಣೆ ಬಗ್ಗೆ ಹಿನ್ನೋಟ ಹರಿಸಿದ ಅವರು ಪಕ್ಷವು 6 ರಾಜ್ಯಗಳ ಚುನಾವಣೆಗಳ ಪೈಕಿ ನಾಲ್ಕರಲ್ಲಿ ಗೆದ್ದಿದೆಎಂದು ಹೇಳಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸುವ ಆಶಯವನ್ನು ವ್ಯಕ್ತಪಡಿಸಿದರು. ವಿಧಾನಸಭೆ ಚುನಾವಣೆಗಳಲ್ಲಿ ಸಾಮಾನ್ಯವಾಗಿ ರಾಜ್ಯ ಸರ್ಕಾರದ ಸಾಧನೆಯ ಆಧಾರದ ಮೇಲೆ ಮತಬೀಳುತ್ತದೆ.

ಆದರೆ ಬಿಜೆಪಿ ಎತ್ತಿದ ಕೆಲವು ವಿಷಯಗಳಾದ ಬೆಲೆಏರಿಕೆ, ಭಯೋತ್ಪಾದನೆ, ರೈತರ ನಿರ್ಲಕ್ಷ್ಯ ಮತ್ತು ರೈತರ ಆತ್ಮಹತ್ಯೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಅವರು ನುಡಿದರು. ಯುಪಿಎ ಸರ್ಕಾರದ ಸರ್ವತೋಮುಖ ವೈಫಲ್ಯವು ಖಂಡಿತವಾಗಿ 2007 ಚುನಾವಣೆ ಮೇಲೆ ಪ್ರಭಾವ ಬೀರಿತು ಎಂದು ಅವರು ನುಡಿದರು.
ಮತ್ತಷ್ಟು
ಭಯೋತ್ಪಾದನೆಯ ಮಾರಕ ಪೆಟ್ಟು: ಸಿಂಗ್
ಹಿಮಾಚಲ ಸೋಲಿನ ಬಗ್ಗೆ ಸೋನಿಯಾ ಮೌನ
ಗುಜರಾತ್, ಹಿಮಾಚಲ ವಿಜಯ ಕೇವಲ ಟ್ರೈಲರ್‌ಗಳು
ಬೇನಜೀರ್ ಸಾವಿಗೆ ಸಿಡಬ್ಲ್ಯುಸಿಯಲ್ಲಿ ಸಂತಾಪ
ಹಿಮಾಚಲವೂ ಬಿಜೆಪಿ ತೆಕ್ಕೆಗೆ: ಕಾಂಗ್ರೆಸಿಗೆ ಆಘಾತ
ಭುಟ್ಟೊ ಹತ್ಯೆ ಶಾಂತಿ ಪ್ರಕ್ರಿಯೆಗೆ ಅಡ್ಡಿ