ಉತ್ತರಪ್ರದೇಶ, ಪಶ್ಚಿಮಬಂಗಾಳ ಮತ್ತು ಬಿಹಾರದಲ್ಲಿ ತಲಾ ಒಂದು ಸ್ಥಾನಗಳು ಸೇರಿದಂತೆ ಲೋಕಸಭೆಯ ಒಟ್ಟು ಮೂರು ಸ್ಥಾನಗಳಿಗೆ ಶನಿವಾರ ಮರುಚುನಾವಣೆ ನಡೆಯಲಿದೆ. ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್ ಅವರ ನಿಧನದಿಂದ ತೆರವಾದ ಬಾಲ್ಲಿಯ ಲೋಕಸಭೆ ಸ್ಥಾನಕ್ಕೆ , ಸಿಪಿಎಂ ಸಂಸದ ದಿಬಕಾಂತ ರೌತ್ ಮತ್ತು ಜೆಡಿಯು ಸಂಸದ ಅಜಿತ್ ಸಿಂಗ್ ನಿಧನದಿಂದ ಕ್ರಮವಾಗಿ ತೆರವಾದ ಬಾಲಗರ್ ಮತ್ತು ಬಿಕ್ರಮಗಂಜ್ ಸ್ಥಾನಗಳಿಗೆ ಈ ಚುನಾವಣೆಗಳು ನಡೆಯಲಿವೆ.
ಬಾಲಿಯದಲ್ಲಿ ಒಟ್ಟು 15 ಲಕ್ಷ ಜನರು 16 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಸಮಾಜವಾದಿ ಪಕ್ಷವು ಚಂದ್ರಶೇಖರ್ ಪುತ್ರ ನೀರಜ್ ಶೇಖರ್ ಅವರನ್ನು ಇಲ್ಲಿ ಕಣಕ್ಕಿಳಿಸಿದೆ. ಬಿಎಸ್‌ಪಿಯು ರಾಜ್ಯದ ಮಾಜಿ ಸಚಿವ ಹರಿ ಶಂಕರ ತಿವಾರಿ ಅವರ ಪುತ್ರ ವಿನಯ್ ಶಂಕರ ತಿವಾರಿ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ವಿರೇಂದ್ರ ಸಿಂಗ್ ಮಸ್ತ್ ಮತ್ತು ರಾಜೀವ್ ಉಪಾಧ್ಯಾಯ ಅವರಿಗೆ ಕ್ರಮವಾಗಿ ಟಿಕೆಟ್ ನೀಡಿದೆ. ಬಿಕ್ರಂಗಂಜ್‌ನಲ್ಲಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರು ಕುಶಾವಾಹ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಬಾಲಗರ್‌ನಲ್ಲಿ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಮತ್ತು ಬಿಜೆಪಿ ಪ್ರತ್ಯೇಕ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಮೀನುಗಾರರ ಸಂಘಟನೆಯ ನಾಯಕ ಸಿಪಿಎಂ ಅಭ್ಯರ್ಥಿ ಭುವನ್ ಪ್ರಮಾನಿಕ್ ವಿರುದ್ಧ ಹಣಾಹಣಿ ಹೋರಾಟಕ್ಕೆ ಇಳಿದಿದ್ದಾರೆ.
|