ಬೇನಜೀರ್ ಭುಟ್ಟೊ ಅವರ ಹತ್ಯೆ ಮತ್ತು ಪಾಕಿಸ್ತಾನದ ಬೆಳವಣಿಗೆಗಳು ಭಾರತಕ್ಕೆ ಗಂಭೀರವಾಗಿ ಕಳವಳಪಡುವ ವಿಷಯವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ತಿಳಿಸಿದ್ದಾರೆ. ಉಭಯ ರಾಷ್ಟ್ರಗಳು ಭಯೋತ್ಪಾದನೆಯ ಸಮಾನ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಹೇಳಿದ ಪ್ರಧಾನಿ ಮನಮೋಹನ ಸಿಂಗ್ ಅವರ ಅಭಿಪ್ರಾಯಗಳು ಸರಿ ಎಂದು ಅವರು ನುಡಿದರು. ಪಾಕಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಬಗ್ಗೆ ನಮಗೆ ಸದಾ ಚಿಂತೆಯಾಗಿದೆ ಎಂದು ಅವರು ಹೇಳಿದರು.
ನಮ್ಮ ಪ್ರಧಾನಮಂತ್ರಿಗಳು ಅದೇ ಮಾತನ್ನು ಹೇಳಿದಾಗ ಅವರನ್ನು ಟೀಕೆ ಮಾಡಲಾಗಿತ್ತು ಎಂದು ನಾರಾಯಣನ್ ಸಮಾರಂಭವೊಂದರ ನೇಪಥ್ಯದಲ್ಲಿ ವರದಿಗಾರರಿಗೆ ತಿಳಿಸಿದರು.
ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಹತ್ಯೆಯ ಬಳಿಕ ಪಾಕಿಸ್ತಾನದಲ್ಲಿ ಉಂಟಾದ ಕ್ಷೋಬೆಯನ್ನು ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಭುಟ್ಟೊ ಹತ್ಯೆಯ ಬಗ್ಗೆ ಮಾತನಾಡುತ್ತಾ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮರಳಿ ಸ್ಥಾಪಿಸಲು ಆಶಿಸಿದ್ದ ವ್ಯಕ್ತಿ ಇನ್ನಿಲ್ಲ ಎಂದು ಉದ್ಗರಿಸಿದರು.
|