ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸರ ಬೊಜ್ಜು ಕರಗಿಸಲು ಭಾಂಗ್ರಾ ನೃತ್ಯ
ಪೊಲೀಸರಿಗೆ ಬೊಜ್ಜು ಬೆಳೆಯುವುದು ಕಳವಳಕಾರಿ ವಿಷಯವಾಗಿದ್ದು, ಪೊಲೀಸ್ ಪಡೆಯ ದೈಹಿಕ ಅರ್ಹತೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಪಂಜಾಬ್ ಪೊಲೀಸರಿಗೆ ಬೊಜ್ಜು ಬೆಳೆದಿರುವ ತಮ್ಮ ಸಿಬ್ಬಂದಿಯ ಬೊಜ್ಜು ಕರಗಿಸುವಂತೆ ಮನವೊಲಿಸುವುದೇ ಸವಾಲಾಗಿ ಪರಿಣಮಿಸಿತ್ತು. ಆದರೆ ದಿನನಿತ್ಯದ ಅಭ್ಯಾಸದಲ್ಲಿ ಭಾಂಗ್ರಾ ನೃತ್ಯಕ್ಕೆ ಕಾಲುಗಳನ್ನು ಕುಣಿಸುವ ಮೂಲಕ ಸಿಬ್ಬಂದಿಯ ಬೊಜ್ಜನ್ನು ಕರಗಿಸುವ ವಿನೂತನ ವಿಧಾನವನ್ನು ಅವರು ಪತ್ತೆಹಚ್ಚಿದ್ದಾರೆ.

ಇತ್ತೀಚೆಗೆ ಮಾಮೂಲಿ ಪರೀಕ್ಷೆಯಲ್ಲಿ ರಾಜ್ಯದ ಅರ್ಧದಷ್ಟು ಪೊಲೀಸರ ಪಡೆಯು ಸ್ಥೂಲಕಾಯ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಪೀಡಿತರಾಗಿರುವುದು ಪತ್ತೆಯಾಯಿತು.
ಅವರಿಗೆ ವಿಶ್ರಾಂತಿಗೆ ಸಮಯ ಸಿಗುತ್ತಿರಲಿಲ್ಲ ಮತ್ತು ನಿಯಮಿತ ಆಹಾರ ಸೇವಿಸುತ್ತಿರಲಿಲ್ಲ. ಕುಟುಂಬದ ಕಡೆ ಗಮನವಹಿಸಲು ಅವರಿಗೆ ಸಮಯಾಭಾವವಿತ್ತು.

ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುವಾಗ ಅವರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವುದು ಅವಶ್ಯಕ ಎಂದು ಪಂಜಾಬ್ ಪೊಲೀಸ್ ತರಬೇತಿ ಅಕಾಡೆಮಿಯ ಉಪ ನಿರ್ದೇಶಕ ಡಾ.ಡಿ.ಜೆ. ಸಿಂಗ್ ಹೇಳಿದರು.

ಲಾಠಿಯನ್ನು ಬೀಸುವುದು ಮತ್ತು ಸಂಚಾರ ನಿಯಂತ್ರಣ ಮುಂತಾದ ಕೌಶಲ್ಯಗಳನ್ನು ಕಲಿತ ಪಂಜಾಬ್ ಪೊಲೀಸರು ತಮ್ಮ ದಿನದ ಡ್ರಿಲ್‌ಗೆ ಭಾಂಗ್ರಾ ನೃತ್ಯವನ್ನೂ ಸೇರ್ಪಡೆ ಮಾಡಿದ್ದಾರೆ. ಈ ಉಪಕ್ರಮವು ಈಗಾಗಲೇ ಫಲಿತಾಂಶ ನೀಡಲು ಆರಂಭಿಸಿದ್ದು,264 ಪೊಲೀಸರು 2 ತಿಂಗಳಲ್ಲೇ ತಲಾ 2 ಕೇಜಿ ತೂಕವನ್ನು ಕಳೆದುಕೊಂಡಿದ್ದಾರೆ.
ಮತ್ತಷ್ಟು
ಕಂದಮಾಲ್ ಜಿಲ್ಲೆಯಲ್ಲಿ ಸತ್ತವರು 3ಕ್ಕೇರಿಕೆ
ಬೇನಜೀರ್ ಹತ್ಯೆ ಗಂಭೀರ ವಿಷಯ: ನಾರಾಯಣನ್
ಮಕ್ಕಳ ಕಾನೂನಿನ ಅಸಮರ್ಪಕ ಅನುಷ್ಠಾನ: ಬಾಲಕೃಷ್ಣನ್
ಲೋಕಸಭೆಯ ಮೂರು ಸ್ಥಾನಗಳಿಗೆ ಮರುಚುನಾವಣೆ
ನರೇಂದ್ರ ಮೋದಿಗೆ ದೆಹಲಿಯಲ್ಲಿ ಭವ್ಯ ಸ್ವಾಗತ
ಕಾಂಗ್ರೆಸ್ ವೈಫಲ್ಯ: ಬಿಜೆಪಿಗೆ ಮೇಲುಗೈ