ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ 2 ವರ್ಷದ ಮಗು ಲಕ್ಷ್ಮಿಗೆ ಬೆಂಗಳೂರಿನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಆಕೆಯ ಗ್ರಾಮದಲ್ಲಿ ಅವಳನ್ನು ದೇವತೆಯಂತೆ ಪೂಜಿಸಲಾಗುತ್ತಿದೆ. ಅಂಗವೈಕಲ್ಯದಿಂದ ಜನಿಸಿದ ಈ ಮಗುವಿಗೆ ಹಿಂದೂ ದೇವತೆ ಲಕ್ಷ್ಮಿಯ ಹೆಸರಿಡಲಾಗಿತ್ತು.
ಭಾರತದ ದೇವತೆಗಳು ಮತ್ತು ದೇವರುಗಳನ್ನು ರಾಮಾಯಣದಲ್ಲಿ ಮತ್ತು ಪೌರಾಣಿಕ ಕಥೆಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಅಸುರರ ಸಂಹಾರಕ್ಕೆ ಒಂದು ಜತೆಗಿಂತ ಹೆಚ್ಚು ಶಸ್ತ್ರಧಾರಿ ಕೈಗಳನ್ನು ಹೊಂದಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಈ ಬಾಲಕಿಯನ್ನು ದೇವತೆಗಳ ಪುನರಾವತಾರ ಎಂದು ಭಾವಿಸಿರುವ ಗ್ರಾಮಸ್ಥರು ಅವಳ ಪೂಜೆಗೆ ಕಾಯಂ ದೇವಸ್ಥಾನ ನಿರ್ಮಿಸಲು ಇಚ್ಛಿಸಿದ್ದಾರೆ.
ಅಂತಹ ಮಗು ಸಾಮಾನ್ಯವಾಗಿ ಬದುಕುಳಿಯುವುದು ಅಪರೂಪ. ಆದರೆ ಲಕ್ಷ್ಮಿ ಶಸ್ತ್ರಚಿಕಿತ್ಸೆಯ ಬಳಿಕ ಬದುಕುಳಿದಿರುವುದು ಪವಾಡ ಎಂದು ಭಾವಿಸಿ ಅವಳ ಹೆಸರಿನಲ್ಲಿ ಗುಡಿಯನ್ನು ಕಟ್ಟಿಸಿ ಪೂಜಿಸಲು ನಿರ್ಧರಿಸಿರುವುದಾಗಿ ಲಕ್ಷ್ಮಿ ಚಿಕ್ಕಪ್ಪ ಹೇಳಿದರು.
|