ಉತ್ತರಪ್ರದೇಶ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತರಾದ ಐವರು ಉಗ್ರಗಾಮಿಗಳು ಗೇಟ್ ವೇ ಆಫ್ ಇಂಡಿಯ ಸೇರಿದಂತೆ ಮುಂಬೈನ ನಾಲ್ಕು ಕಿಕ್ಕಿರಿದ ಪ್ರದೇಶಗಳಲ್ಲಿ ಏಕಕಾಲದ ಸ್ಫೋಟಗಳನ್ನು ನಡೆಸಲು ಇಚ್ಛಿಸಿದ್ದರೆಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ.
ಉತ್ತರಪ್ರದೇಶದ ಬಾರಾಬಂಕಿ, ಜಮ್ಮುಕಾಶ್ಮೀರದ ದೋಡಾ, ಪಶ್ಚಿಮಬಂಗಾಳದ ಉತ್ತರ 24 ಪರಗಣ ಜಿಲ್ಲೆಗಳಿಂದ ಬಂಧಿತರಾದ ಐವರು ಉಗ್ರಗಾಮಿಗಳನ್ನು ತನಿಖಾಧಿಕಾರಿಗಳು ತನಿಖೆಗೆ ಒಳಪಡಿಸಿದಾಗ ಮುಂಬೈನಲ್ಲಿ ಇನ್ನೊಂದು ಸರಣಿ ಸ್ಫೋಟವನ್ನು ನಡೆಸಲು ಬಾಂಗ್ಲಾದೇಶ ಮೂಲದ ಹರ್ಕತ್ ಉಲ್ ಜೆಹಾದಿ ಇಸ್ಲಾಮಿಯ ಸಂಘಟನೆಯೋಜಿಸಿರುವ ವಿಷಯ ಬಹಿರಂಗಪಡಿಸಿದ್ದಾರೆ.
ಲಕ್ನೋ, ಫೈಜಾಬಾದ್ ಮತ್ತು ವಾರಣಾಸಿ ನಗರಗಳಲ್ಲಿ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಇವರೆಲ್ಲರನ್ನೂ ಬಂಧಿಸಲಾಗಿತ್ತು. ಗೇಟ್ ವೇ ಆಫ್ ಇಂಡಿಯ, ಅಂಧೇರಿ, ಒಬೆರಾಯ್ ಹೊಟೆಲ್ ಮತ್ತು ನವಿ ಮುಂಬೈ ಮುಂತಾದ ಪ್ರದೇಶಗಳಲ್ಲಿ ಈ ಉಗ್ರಗಾಮಿಗಳು ತಾಲೀಮು ನಡೆಸಿದ್ದರು. ಆದರೆ ಇಬ್ಬರು ಜೈಷ್ ಇ ಮೊಹಮದ್ ಉಗ್ರರನ್ನು ಉತ್ತರಪ್ರದೇಶದ ವಕೀಲರು ಥಳಿಸಿದ ಬಳಿಕ ಅವರು ಮುಂಬೈನಲ್ಲಿ ಸ್ಫೋಟ ನಡೆಸುವ ಯೋಜನೆಯನ್ನು ಬದಲಿಸಿದರು.
|