ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಕಾನೆರ್ ಹೊಸ ವರ್ಷಾಚರಣೆಗೆ ಪ್ರಶಸ್ತ ಸ್ಥಳ
ಜೈಪುರದಿಂದ 320 ಕಿಮೀ ದೂರವಿರುವ ಮರಳುಗಾಡು ನಗರ ಬಿಕಾನೆರ್ ಹೊಸ ವರ್ಷ ಆಚರಣೆಗೆ ಪ್ರವಾಸಿಗಳಿಗೆ ಪ್ರಶಸ್ತ ತಾಣವಾಗಿದ್ದು, ಅಲ್ಲಿ ಹೊಸ ವರ್ಷದಂದು ಪ್ರವಾಸಿಗಳಿಂದ ಗಿಜಿಗುಟ್ಟುತ್ತದೆ.

ಅಂತಾರಾಷ್ಟ್ರೀಯ ಪ್ರವಾಸಿಗಳಿಗೆ ಹೋಲಿಸಿದರೆ ಇಲ್ಲಿಗೆ ಬರುವ ದೇಶೀಯ ಪ್ರವಾಸಿಗರ ಸಂಖ್ಯೆಯೇ ಹೆಚ್ಚು. ದೇಶೀಯರು ಒಂಟೆ ಸಫಾರಿ ಮತ್ತು ಜಾನಪದ ನೃತ್ಯಗಳು ಮುಂತಾದ ಮನರಂಜನೆಗಳಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬರುತ್ತಾರೆ. ಇಲ್ಲಿನ ಪ್ರಶಾಂತ ಮತ್ತು ನಿರ್ಮಲ ವಾತಾವರಣವು ಅನೇಕ ಮಂದಿ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ.

ಬಿಕಾನೆರ್‌ನ ಜಾನಪದ ನೃತ್ಯವನ್ನು ವೀಕ್ಷಿಸಲು ಮತ್ತು ಪಾಲ್ಗೊಳ್ಳಲು ಬಯಸುವುದಾಗಿ ಹಾಲೆಂಡ್ ಪ್ರವಾಸಿ ಖುಂಗಾ ಹೇಳುತ್ತಾರೆ. ನಾವು ಜೈಪುರದಲ್ಲಿ ಹೊಸ ವರ್ಷ ಆಚರಿಸುತ್ತೇವೆ ಎಂದು ಜರ್ಮನಿಯ ಪ್ರವಾಸಿ ಸಾರಾ ಹೇಳುತ್ತಾರೆ. ಜೈಪುರವು ಅನೇಕ ಕೋಟೆಗಳು, ಅರಮನೆಗಳು ಮತ್ತು ದೇವಸ್ಥಾನಗಳ ನಗರಿಯಾಗಿದ್ದು, ಪ್ರವಾಸಿಗಳ ಆಕರ್ಷಣೀಯ ತಾಣವಾಗಿದೆ.

ರಾಜಸ್ತಾನವು ಭವ್ಯ ಅರಮನೆಗಳಿಗೆ ಶ್ರೀಮಂತ ಸಂಸ್ಕೃತಿಗೆ, ವೃಕ್ಷ ಸಂಪತ್ತು ಮತ್ತು ಪ್ರಾಣಿ ಸಂಕುಲಗಳಿಗೆ , ಮರಳು ದಿಬ್ಬಗಳ ತಾಣವಾಗಿದ್ದು, ಪ್ರವಾಸಿಗಳ ಆಕರ್ಷಣೆಯ ಕೇಂದ್ರವಾಗಿದೆ.
ಮತ್ತಷ್ಟು
ಮುಂಬೈ, ಗೇಟ್ ವೇ ಆಫ್ ಇಂಡಿಯ ಸ್ಫೋಟಕ್ಕೆ ಸಂಚು
ಕೇರಳದ ಮುಖ್ಯಮಂತ್ರಿಯಿಂದ ಶಬರಿಮಲೆ ಯಾತ್ರೆ
ಪ್ರಾಚೀನ ಗುರುಕುಲಕ್ಕೆ ಪುನಶ್ಚೇತನ ನೀಡಿದ ಶಾಲೆ
ತಮಿಳುನಾಡಿನಲ್ಲಿ ನೆಲೆಗೆ ಎಲ್‌ಟಿಟಿಇ ಯೋಜನೆ: ಜಯಾ
ಸುನಿಲ್ ಜೋಷಿ ಹತ್ಯೆ: ದಿವಾಸ್‌ನಲ್ಲಿ ನಿಷೇಧಾಜ್ಞೆ
ತಿರುಪತಿ ಹೊಸ ವರ್ಷ: ಲಕ್ಷ ಭಕ್ತರಿಗೆ ಉಚಿತ ಲಡ್ಡು