ಕೇಂದ್ರ ಸರ್ಕಾರದ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾವನೆಯಿಲ್ಲ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸೋಮವಾರ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮಾದ್ಯಮದ ಕೆಲವು ವರ್ಗಗಳಿಂದ ವರದಿಗಳು ಬಂದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಹೊರಬಿದ್ದಿದೆ.
ಇಂತಹ ಎಲ್ಲ ಊಹಾಪೋಹಗಳಿಗೆ ತೆರೆಎಳೆಯುವ ಉದ್ದೇಶದಿಂದ ಈ ಸ್ಪಷ್ಟೀಕರಣ ನೀಡಲಾಗಿದ್ದು, ಸರ್ಕಾರದ ಮುಂದೆ ಇಂತಹ ಪ್ರಸ್ತಾವನೆ ಇಲ್ಲ ಎಂದು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಿವೃತ್ತಿ ವಯಸ್ಸನ್ನು ವರ್ಷಗಳಿಗೆ ಏರಿಸುವುದರಿಂದ ಸರ್ಕಾರ ಒಟ್ಟು ಮೊತ್ತದಲ್ಲಿ ಭವಿಷ್ಯನಿಧಿ, ಗ್ರಾಚ್ಯುಟಿ ಹಣವನ್ನು ಎರಡು ವರ್ಷದ ಮಟ್ಟಿಗೆ ಉಳಿತಾಯವಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿತ್ತು.
|