ಉತ್ತರ ಪ್ರದೇಶದ ರಾಂಪುರ ಕೇಂದ್ರ ಮೀಸಲು ಪೊಲೀಸ್ ಪಡೆ ಶಿಬಿರದ ಮೇಲೆ ಮಂಗಳವಾರದಂದು ಉಗ್ರರು ನಡಸಿದ ದಾಳಿಗೆ ಏಳು ಜನರು ಬಲಿಯಾಗಿದ್ದರು.ದಾಳಿಯ ನಂತರ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಿಆರ್‌ಪಿಎಫ್ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಈ ಮೊದಲೇ ಬಂದಿದ್ದ ಬೆದರಿಕೆ ಕರೆಗಳ ಕುರಿತಾಗಿ ಕೇಂದ್ರ ರಕ್ಷಣಾ ಸಂಸ್ಥೆಗೆ ರಾಜ್ಯ ಸರಕಾರವು ಸೂಚನೆ ನೀಡಿದೆ ಎಂದು ಉತ್ತರ ಪ್ರದೇಶ ಮಖ್ಯಮಂತ್ರಿ ಮಾಯಾವತಿ ತಿಳಿಸಿದ್ದಾರೆ.
ಕೆಲವು ಸಮಯಗಳ ಮೊದಲು ರಾಂಪುರ ಜಿಲ್ಲೆಯ ಅಧಿಕಾರಿಗಳು ಸಿಆರ್‌ಪಿಎಫ್ ಅಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದರು, ಈ ಘಟನೆ ಕುರಿತಂತೆ ಸಿಆರ್‌ಪಿಎಫ್ ನಿರ್ಲಕ್ಷ್ಯ ವಹಿಸಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.
ಈ ದಾಳಿಯು ಸರಕಾರದ ವೈಫಲ್ಯದ ಒಂದು ಭಾಗವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಅವರು, ಸಿಆರ್‌ಪಿಎಫ್ ಮೇಲಿನ ದಾಳಿಯ ಬೆದರಿಕೆಗೆ ಕುರಿತಾಗಿ ಗುಪ್ತಮಾಹಿತಿ ವ್ಯವಸ್ಥೆಯಂತೆ ಕಾರ್ಯನಿರ್ವಹಿಸಿದ್ದೇವೆ. ಅಲ್ಲದೆ ಇದರ ಬಗ್ಗೆ ಸಿಆರ್‌ಪಿಎಫ್ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ಕೂಡಾ ನೀಡಲಾಗಿತ್ತು ಎಂದು ಹೇಳಿದರು.
ಉಗ್ರಗಾಮಿಗಳು ಶಿಬಿರಕ್ಕೆ ಹೇಗೆ ತಲುಪಿದ್ದರು ಎಂಬ ಪ್ರಶ್ನೆಗೆ ಉತ್ತರಿಸಿದ ಮಾಯಾವತಿ, ಉಗ್ರಗಾಮಿಗಳು ಶಿಬಿರ ಸುತ್ತ ವ್ಯಾಪಿಸಿದ್ದರೂ, ಈ ಬಗ್ಗೆ ಈ ಮೊದಲೇ ಮುನ್ನಚ್ಚರಿಕೆ ನೀಡಿದ್ದರಿಂದ ಉಗ್ರಗಾಮಿಗಳ ದಾಳಿಯನ್ನು ತಪ್ಪಿಸುವುದು ಸಿಆರ್‌ಪಿಎಫ್ ಪಡೆಗಳ ಕರ್ತವ್ಯವಾಗಿತ್ತು ಎಂದು ಹೇಳಿದರು.
ರಾಂಪುರ ಜಿಲ್ಲೆಯ ಸಿಆರ್‌ಪಿಎಫ್ ಕೇಂದ್ರದ ಮೇಲೆ ಉಗ್ರರು ಮಂಗಳವಾರ ದಾಳಿ ನಡೆಸಿದ್ದು, ಏಳು ಮಂದಿ ಯೋಧರು ಹಾಗೂ ಒಬ್ಬ ನಾಗರಿಕ ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು.
|