ಉಸಿರಾಟದ ತೊಂದರೆ ಕಾಣಿಸಿಕೊಂಡ ಪರಿಣಾಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅವರ ಸ್ಥಿತಿ ಸ್ಥಿರವಾಗಿದೆ. ಆಕೆ ಸಾಮಾನ್ಯ ಆಹಾರ ಸೇವಿಸಿದ್ದಾರೆ ಎಂದು ಗಂಗಾ ರಾಮ್ ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ..
ಉಸಿರಾಟದ ತೊಂದರೆ ಇದೆ ಎಂದು ಹೇಳಿದ ಕಾರಣ ಸೋನಿಯಾ ಅವರನ್ನು ಮಂಗಳವಾರ ನಸುಕುಹರಿಯುವ ಮುಂಚೆ ಅಂದರೆ ಸೋಮವಾರ ತಡರಾತ್ರಿ 1ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 61ರ ಹರೆಯದ ಸೋನಿಯಾ ಗಾಂಧಿ ಅವರಿಗೆ ಪಪ್ಪುಸ ಭಾಗದ ಸೋಂಕು ತಗುಲಿತ್ತು.
|