ಹೊಸ ವರ್ಷದ ದಿನದಂದೇ ಇಲ್ಲಿನ ಪಂಚತಾರಾ ಹೊಟೆಲ್ ಹೊರಗೆ ಯುವಕರ ಗುಂಪೊಂದು ಇಬ್ಬರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿ ಅವರಿಗೆ ಕಿರುಕುಳ ನೀಡಿದ್ದಲ್ಲದೇ ಮೈಮೇಲಿದ್ದ ಬಟ್ಟೆಯನ್ನು ಹರಿದುಹಾಕಿದ ಘಟನೆ ನಡೆದಿದೆ.
ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಪ್ರಮುಖ ಇಂಗ್ಲೀಷ್ ದಿನಪತ್ರಿಕೆಯ ಸ್ಥಳೀಯ ಸಂಚಿಕೆಯೊಂದು ಈ ಘಟನೆಯ ಅನೇಕ ಚಿತ್ರಗಳ ಸರಣಿಯನ್ನು ಪ್ರಕಟಿಸಿದೆ.
ನಮಗೆ ಅಂತಹ ಯಾವುದೇ ದೂರುಗಳು ಬಂದಿಲ್ಲ. ಹೊಟೆಲ್ ಹೊರಗೆ ಸೂಕ್ತ ಭದ್ರತೆ ಮಾಡಲಾಗಿದ್ದು, ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ತಿಳಿಸಿದ್ದರೂ, ಈ ಘಟನೆ ನಡೆದಿರುವುದು ದೃಢಪಟ್ಟಿದೆ.
ಮಂಗಳವಾರ ಮಧ್ಯಾಹ್ನ 1.45ಕ್ಕೆ ಮಹಿಳೆಯರು ತಮ್ಮ ಪುರುಷ ಸಂಗಾತಿಗಳೊಂದಿಗೆ ಹೊಟೆಲ್‌ನಿಂದ ಜುಹೂ ಸಮುದ್ರ ಕಿನಾರೆಗೆ ತೆರಳುತ್ತಿದ್ದಾಗ ಈ ಈ ಘಟನೆ ಸಂಭವಿಸಿದೆ. ಸುಮಾರು 70-80 ಜನರಿದ್ದ ಗುಂಪು ಮಹಿಳೆಯರ ಬಟ್ಟೆಗಳನ್ನು ಹರಿದುಹಾಕಿದ್ದಲ್ಲದೇ, ಅವರ ಜತೆ ಅಶ್ಲೀಲವಾಗಿ ವರ್ತಿಸಿ ಅವರಿಗೆ ಕಿರುಕುಳ ನೀಡಿದರೆಂದು ಹೇಳಲಾಗಿದೆ. ಮಹಿಳೆಯರ ಜತೆಯಿದ್ದ ಪುರುಷ ಸಂಗಾತಿಗಳು ಅಸಹಾಯಕತೆಯಿಂದ ವೀಕ್ಷಿಸಿದರೆಂದು ಹೇಳಲಾಗಿದೆ.
|