ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನೆಯಲ್ಲಿ ಆತ್ಮಹತ್ಯೆ: ಮನಃಶಾಸ್ತ್ರ ತರಬೇತಿ
ಸೇನಾಸಿಬ್ಬಂದಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನಸಿಕ ಒತ್ತಡ ಹೆಚ್ಚಳದಿಂದ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು 4000 ಕಿರಿಯ ಅಧಿಕಾರಿಗಳಿಗೆ ಮನಶಾಸ್ತ್ರಜ್ಞರ ತರಬೇತಿ ನೀಡಲು ಭಾರತೀಯ ಸೇನಾ ಪಡೆ ಯೋಜಿಸಿದೆ. ಕೆಲವು ಸಿಬ್ಬಂದಿ ತೀವ್ರ ಒತ್ತಡ ಅನುಭವಿಸುತ್ತಿದ್ದು, ಅದಕ್ಕೆ ಅನೇಕ ಕಾರಣಗಳಿವೆ.

ಸೇನಾ ಆಸ್ಪತ್ರೆಗಳಲ್ಲಿ 60 ಮನಃಶಾಸ್ತ್ರಜ್ಞರರಿದ್ದು, 4000 ಮನಃಶಾಸ್ತ್ರ ಸಲಹೆಗಾರರಾಗಿ ಕಿರಿಯ ಅಧಿಕಾರಿಗಳಿಗೆ ತರಬೇತಿ ನೀಡುವ ಪ್ರಕ್ರಿಯೆಯಲ್ಲಿ ಇರುವುದಾಗಿ ಲೆಫ್ಟಿನೆಂಟ್ ಜನರಲ್ ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ. ಕಿರಿಯ ಅಧಿಕಾರಿಗಳಿಗೆ ಸಲಹೆಗಾರರಾಗಿ ತರಬೇತಿ ನೀಡಿದರೂ ಕೂಡ ಅವರು ತಮ್ಮ ಮಾಮೂಲಿ ಕರ್ತವ್ಯವನ್ನೂ ನಿರ್ವಹಿಸುತ್ತಾರೆ ಎಂದು ಸಿಂಗ್ ನುಡಿದರು.

12 ತಿಂಗಳ ತರಬೇತಿ ಬಳಿಕ ಪ್ರತಿಯೊಬ್ಬ ಸಲಹೆಗಾರನನ್ನು ಜಮ್ಮು ಕಾಶ್ಮೀರ, ಮತ್ತು ಈಶಾನ್ಯ ರಾಜ್ಯಗಳ ಅತ್ಯಂತ ಸೂಕ್ಷ್ಮ ವಲಯಗಳಲ್ಲಿ ನಿಯೋಜಿಸಲಾಗುವುದು ಎಂದು ಅವರು ನುಡಿದರು.'

2006ರಲ್ಲಿ 120 ಆತ್ಮಹತ್ಯೆ ಪ್ರಕರಣಗಳು ಸಂಭವಿಸಿದ್ದರೆ 2007ರಲ್ಲಿ 110 ಆತ್ಮಹತ್ಯೆ ಪ್ರಕರಣಗಳು ಸಂಭವಿಸಿವೆ. ಕಾಲ್ದಳ, ನೌಕಾಪಡೆ ಮತ್ತು ವಾಯುಪಡೆ ಒಳಗೊಂಡ ಸೇನಾಪಡೆಯಲ್ಲಿ 407 ಆತ್ಮಹತ್ಯೆ ಪ್ರಕರಣಗಳು ಪತ್ತೆಯಾಗಿವೆ.
ಮತ್ತಷ್ಟು
ಮಾವೋವಾದಿ ದಾಳಿ:ಒಬ್ಬ ಪೊಲೀಸ್ ಹತ್ಯೆ
ರಾಷ್ಟ್ರಪತಿ ಆಳ್ವಿಕೆ ಅಸಂವಿಧಾನಿಕ: ರಿಯೊ
ಮುಂಬೈ:ಇಬ್ಬರು ಮಹಿಳೆಯರ ಜತೆ ಅಸಭ್ಯ ವರ್ತನೆ
ಉಸಿರಾಟದ ತೊಂದರೆ: ಸೋನಿಯಾಗೆ ಚಿಕಿತ್ಸೆ
ಸಿಆರ್‌ಪಿಎಫ್ ದಾಳಿ:ದೇಶಾದ್ಯಂತ ಕಟ್ಟೆಚ್ಚರ
ಹೊಸ ವರ್ಷದ ಸಂಭ್ರಮ ತಂದ ಕುತ್ತು