ಹೊಸ ವರ್ಷದ ದಿನದಂದೇ ರೈಲ್ವೆ ಸಚಿವ ಲಾಲು ಪ್ರಸಾದ್ ಪುತ್ರರಿಬ್ಬರು ಯುವತಿಯರನ್ನು ಚುಡಾಯಿಸಿ ಅಜ್ಞಾತ ಯುವಕರಿಂದ ಪೆಟ್ಟು ತಿಂದ ಘಟನೆ ನಡೆದಿದೆ. ಲಾಲು ಪುತ್ರದ್ವಯರಾದ ತರುಣ್ ಮತ್ತು ತೇಜ್‌ಪಾಲ್ ಅವರನ್ನು ಜತೆಗೂಡಿದ್ದ ಸಿಬ್ಬಂದಿ ಭದ್ರತಾ ಅಧಿಕಾರಿ ತನ್ನ ಸೇವಾ ಪಿಸ್ತೂಲನ್ನು ಈ ಸಂದರ್ಭದಲ್ಲಿ ಕಳೆದುಕೊಂಡಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಲಾಲು ಪುತ್ರರು ಅಶೋಕ ಹೊಟೆಲ್ ಮತ್ತು ಕನ್ನಾಟ್ ಪ್ಲೇಸ್‌ನಲ್ಲಿ ಹುಡುಗಿಯರಿಗೆ ಕೀಟಲೆ ಮಾಡಿದ ಬಳಿಕ ಚತ್ತಾರ್‌ಪುರ ಪ್ರದೇಶದ ಭೋಜನಕೂಟದಲ್ಲಿ ಪಾಲ್ಗೊಂಡು ಹಿಂತಿರುಗಿ ಬರುವಾಗ ತೋಟದ ಮನೆಯಲ್ಲಿದ್ದ ಹುಡುಗಿಯರಿಗೆ ಕೀಟಲೆ ಮಾಡಿದರೆಂದು ಆರೋಪಿಸಲಾಗಿದೆ.
ಆದರೆ ಈ ಬಾರಿ ಅವರ ಅದೃಷ್ಟ ಕೈಕೊಟ್ಟು, ಕೆಲವು ಯುವಕರ ಗುಂಪು ಲಾಲು ಪುತ್ರರಿಗೆ ಥಳಿಸಿದರೆಂದು ತಿಳಿದುಬಂದಿದೆ. ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಕೊಂಡ ಪಿಎಸ್‌ಒಗಳು ಇಬ್ಬರ ಗುರುತನ್ನು ಹೇಳಿರಲಿಲ್ಲ.
|