ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತಿಗಳ ಮೇಲೆ ದಾಳಿ: ಮೋದಿ ಕಳವಳ
PTI
ಗುಜರಾತಿನ ವಲಸಿಗರ ಮೇಲೆ ಕೀನ್ಯದಲ್ಲಿ ದಾಳಿ ಮಾಡುತ್ತಿರುವ ಬಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದಿರುವ ಮೋದಿ ಕೀನ್ಯದಲ್ಲಿ ಗುಜರಾತಿಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೀನ್ಯದಲ್ಲಿ ಗುಜರಾತಿಗಳ ಸುರಕ್ಷತೆ ಬಗ್ಗೆ ಖಾತರಿಗೆ ಕೀನ್ಯ ಸರ್ಕಾರದ ಜತೆ ಮಾತುಕತೆ ನಡೆಸಬೇಕೆಂದು ಕೂಡ ಅವರು ಮನಮೋಹನ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಕಿಸುಮುವಿನ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಆಶ್ರಯ ಪಡೆದ 400 ಗುಜರಾತಿಗಳ ಸುರಕ್ಷತೆ ಬಗ್ಗೆ ಮೋದಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಕೀನ್ಯದಲ್ಲಿ ಚುನಾವಣೆ ಬಳಿಕದ ಗಲಭೆ ಉದ್ಭವಿಸಿದಾಗಿನಿಂದ ಗುಜರಾತಿ ಜನರು ಭಯದಿಂದ ತಲ್ಲಣಿಸುವಂತಾಗಿದೆ. ಹಿಂಸಾಚಾರದ ಬಳಿಕ ನೂರಾರು ಗುಜರಾತಿ ವ್ಯಾಪಾರಿಗಳು ಕಿಸುಮು ನಗರದ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ.

ಗುಜರಾತಿಗಳ ಕಚೇರಿ ಮತ್ತು ಕಾರ್ಖಾನೆಗಳನ್ನು ಲೂಟಿ ಮಾಡಲಾಗುತ್ತಿದ್ದು, ಕಿನ್ಯ ನಿವಾಸಿಗಳು ಅವರ ಮನೆಗಳ ಮೇಲೆ ದಾಳಿನಡೆಸುತ್ತಿದ್ದಾರೆ. ಕೀನ್ಯದ ಅಧ್ಯಕ್ಷೀಯ ಚುನಾವಣೆಯಲ್ಲಿ ರೈಲಾ ಒಡಿಂಗಾ ಸೋಲಪ್ಪಿ ಚುನಾವಣೆ ಅಕ್ರಮದ ಬಗ್ಗೆ ಆರೋಪ ಮಾಡಿದ ಬಳಿಕ ಪೂರ್ವ ಆಫ್ರಿಕ ರಾಷ್ಟ್ರವು ಹಿಂಸಾಚಾರದಿಂದ ತತ್ತರಿಸಿದೆ.

ಅಧ್ಯಕ್ಷ ವಾಯ್ ಕಿಬಾಕಿ ವಿಜಯಿಯೆಂದು ಘೋಷಿಸಿದ ಬಳಿಕ ಅನೇಕ ಮಂದಿ ಸತ್ತಿದ್ದಾರೆ ಮತ್ತು ಸಾವಿರಾರು ಜನರು ಸ್ಥಳಾಂತರ ಮಾಡಿದ್ದಾರೆ. ಈ ಗಲಭೆಯು ಜನಾಂಗೀಯ ಹಿಂಸಾಚಾರಕ್ಕೆ ತಿರುಗಿ ಗುಜರಾತಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಮತ್ತಷ್ಟು
ಚುಡಾಯಿಸಿದ ಲಾಲು ಪುತ್ರರಿಗೆ ಪೆಟ್ಟು
ವಿನ್ಯಾಸಕನ ಮೇಲೆ ದೂರು ನಿರಾಧಾರ
ಸೇನೆಯಲ್ಲಿ ಆತ್ಮಹತ್ಯೆ: ಮನಃಶಾಸ್ತ್ರ ತರಬೇತಿ
ಮಾವೋವಾದಿ ದಾಳಿ:ಒಬ್ಬ ಪೊಲೀಸ್ ಹತ್ಯೆ
ರಾಷ್ಟ್ರಪತಿ ಆಳ್ವಿಕೆ ಅಸಂವಿಧಾನಿಕ: ರಿಯೊ
ಮುಂಬೈ:ಇಬ್ಬರು ಮಹಿಳೆಯರ ಜತೆ ಅಸಭ್ಯ ವರ್ತನೆ