ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನಕದುರ್ಗಾ ಮಂದಿರ ಬಳಿ ಕಾಲ್ತುಳಿತ: 6 ಸಾವು
ಸಮೀಪದ ಪ್ರಖ್ಯಾತ ಕನಕದುರ್ಗಾ ಮಂದಿರದ ಸ್ನಾನಘಟ್ಟದಲ್ಲಿ ನಡೆದ ಕಾಲ್ತುಳಿತದಲ್ಲಿ ಐವರು ಮಹಿಳೆಯರು ಹಾಗೂ ಒಬ್ಬ ಮಗು ಸೇರಿ ಐದು ಮಂದಿ ದುರಂತ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 18 ಮಂದಿ ಗಾಯಗೊಂಡಿದ್ದಾರೆ.

ಭವಾನಿ ದೀಕ್ಷೆ ಎಂಬ ಧಾರ್ಮಿಕ ಸಂಪ್ರದಾಯದ ಕೊನೆಯ ದಿನವಾದ ಗುರುವಾರ ಸಾವಿರಾರು ಭಕ್ತರು ದುರ್ಗಾ ಘಾಟ್‌ಗೆ ಆಗಮಿಸಿದ್ದರು. ನೂಕು ನುಗ್ಗಲು ಹೆಚ್ಚಾದ ಪರಿಣಾಮ ಒಬ್ಬರ ಮೇಲೊಬ್ಬರು ಬಿದ್ದು ಈ ದುರಂತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ದುರ್ಗಾ ಘಾಟ್‌ನಲ್ಲಿ ಸ್ನಾನ ಮಾಡಿದ ನಂತರ ಭಕ್ತರು ಬೆಟ್ಟದ ಮೇಲಿರುವ ಕನಕದುರ್ಗೆಯ ಕ್ಷೇತ್ರವನ್ನು ಸಂದರ್ಶಿಸುತ್ತಾರೆ.

ಗಾಯಾಳುಗಳಲ್ಲಿ 10 ಮಂದಿಯನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಒಬ್ಬ ಮಹಿಳಾ ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ.

ಈ ಕುರಿತು ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಸಚಿವ ಜೆ.ರತ್ನಾಕರ ರಾವ್ ಅವರು ವಿಭಾಗೀಯ ತನಿಖೆಗೆ ಆದೇಶಿಸಿದ್ದು, ಯಾತ್ರಾರ್ಥಿಗಳಿಗಾಗಿ ಸೂಕ್ತ ವ್ಯವಸ್ಥೆ ಮಾಡದಿರುವ ಮಂದಿರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಸರಕಾರವು ತಲಾ ಒಂದು ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 10 ಸಾವಿರ ರೂ. ಪರಿಹಾರ ಘೋಷಿಸಿದೆ.
ಮತ್ತಷ್ಟು
ಗುಜರಾತಿಗಳ ಮೇಲೆ ದಾಳಿ: ಮೋದಿ ಕಳವಳ
ಚುಡಾಯಿಸಿದ ಲಾಲು ಪುತ್ರರಿಗೆ ಪೆಟ್ಟು
ವಿನ್ಯಾಸಕನ ಮೇಲೆ ದೂರು ನಿರಾಧಾರ
ಸೇನೆಯಲ್ಲಿ ಆತ್ಮಹತ್ಯೆ: ಮನಃಶಾಸ್ತ್ರ ತರಬೇತಿ
ಮಾವೋವಾದಿ ದಾಳಿ:ಒಬ್ಬ ಪೊಲೀಸ್ ಹತ್ಯೆ
ರಾಷ್ಟ್ರಪತಿ ಆಳ್ವಿಕೆ ಅಸಂವಿಧಾನಿಕ: ರಿಯೊ