ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೌರ ವಿದ್ಯುತ್ ಘಟಕಕ್ಕೆ ಪ್ರೋತ್ಸಾಹ ಧನ
11ನೇ ಯೋಜನಾವಧಿಯಲ್ಲಿ 50 ಮೆಗಾವಾಟ್ ಸೌರ ವಿದ್ಯುತ್ ಘಟಕ ಸೇರಿದಂತೆ ಗ್ರಿಡ್ ಇಂಟರಾಕ್ಟಿವ್ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸುವ ಹೊಸ ಯೋಜನೆಗೆ ಮರುಬಳಕೆ ಇಂಧನ ಸಚಿವಾಲಯ ಚಾಲನೆ ನೀಡಿದೆ.ಹೊಸ ಮತ್ತು ಮರುಬಳಕೆ ಇಂಧನ ರಾಜ್ಯ ಸಚಿವ ವಿಲಾಸ್ ಮುಟ್ಟೆಂವಾರ್ ಬುಧವಾರ ಈ ವಿಷಯ ತಿಳಿಸಿದರು.

ಸಚಿವಾಲಯವು ಮೊದಲ ಬಾರಿಗೆ ಉತ್ಪಾದನೆ ಮೂಲದ ಪ್ರೋತ್ಸಾಹಕಗಳನ್ನು ಘೋಷಿಸಿದೆ. ಪ್ರೋತ್ಸಾಹಕಗಳ ಅಡಿಯಲ್ಲಿ ವಿದ್ಯುತ್ ಜಾಲಕ್ಕೆ ಪೂರೈಸುವ ಸೌರ ವಿದ್ಯುತ್ ಫಲಕಗಳಿಂದ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಪ್ರತಿ ಕಿಲೋ ವಾಟ್ ಅವರ್‌ ಅಥವಾ ಪ್ರತಿ ಯೂನಿಟ್‌ಗೆ 12 ರೂ. ಆರ್ಥಿಕ ನೆರವು ಮತ್ತು ಸೌರ ಉಷ್ಣ ವಿದ್ಯುತ್ ಶಕ್ತಿಗೆ ಸಂಬಂಧಿಸಿದಂತೆ ಪ್ರತಿ ಕಿಲೊ ವಾಟ್‌ಗೆ ತಲಾ 10 ರೂ. ಆರ್ಥಿಕ ಧನವನ್ನು ಸರ್ಕಾರ ಒದಗಿಸಲಿದೆ.

ಈ ಪ್ರೋತ್ಸಾಹಕಗಳನ್ನು ನಿಗದಿತ ದರದಲ್ಲಿ 10 ವರ್ಷಗಳವರೆಗೆ ಯೋಜನೆ ಡೆವಲಪರ್‌ಗೆ ಒದಗಿಸಲಾಗುವುದು ಎಂದು ಹೇಳಿದರು. ಈ ಕಾರ್ಯಕ್ರಮದಡಿಯಲ್ಲಿ ಪ್ರತಿಯೊಂದು ರಾಜ್ಯಕ್ಕೆ 10 ಮೆಗಾವಾಟ್ ಗರಿಷ್ಠ ಸಾಮರ್ಥ್ಯದ ಘಟಕದ ಸ್ಥಾಪನೆಗೆ ಅವಕಾಶ ನೀಡಲಾಗುವುದು. ಈ ಯೋಜನೆಯು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದೆಂದು ಅಂದಾಜು ಮಾಡಲಾಗಿದೆ.
ಮತ್ತಷ್ಟು
ಕನಕದುರ್ಗಾ ಮಂದಿರ ಬಳಿ ಕಾಲ್ತುಳಿತ: 6 ಸಾವು
ಗುಜರಾತಿಗಳ ಮೇಲೆ ದಾಳಿ: ಮೋದಿ ಕಳವಳ
ಚುಡಾಯಿಸಿದ ಲಾಲು ಪುತ್ರರಿಗೆ ಪೆಟ್ಟು
ವಿನ್ಯಾಸಕನ ಮೇಲೆ ದೂರು ನಿರಾಧಾರ
ಸೇನೆಯಲ್ಲಿ ಆತ್ಮಹತ್ಯೆ: ಮನಃಶಾಸ್ತ್ರ ತರಬೇತಿ
ಮಾವೋವಾದಿ ದಾಳಿ:ಒಬ್ಬ ಪೊಲೀಸ್ ಹತ್ಯೆ