ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2 ವಾರ ಕಾಲಾವಕಾಶ ಕೋರಿದ ಮೊಹಂತಿ
ಆಳ್ವಾರ್ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಯ ತಂದೆ ಒರಿಸ್ಸಾದ ಮಾಜಿ ಡಿಜಿಪಿ ಬಿ.ಬಿ. ಮೊಹಂತಿ ತಾವು ಕೋರ್ಟ್‌ಗೆ ಶರಣಾಗಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಒರಿಸ್ಸಾದ ಹಿರಿಯ ಪೊಲೀಸ್ ಅಧಿಕಾರಿಯಾದ ಮೊಹಂತಿಯು ತಮ್ಮ ಪುತ್ರ, ಅತ್ಯಾಚಾರ ಆರೋಪಿ ಬಿಟ್ಟಿ ಹೋತ್ರಾ ಪೆರೋಲ್ ಮುರಿದು ಪೊಲೀಸರಿಂದ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆಂದು ಆರೋಪಿಸಲಾಗಿದೆ.

ಮೊಹಂತಿ ಪುತ್ರ ಜರ್ಮನಿ ಪ್ರವಾಸಿಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊರಿಸಿದ ರಾಜಸ್ತಾನ ಕೋರ್ಟ್ ಅವರನ್ನು ತಪ್ಪಿತಸ್ಥರನ್ನಾಗಿಸಿತ್ತು, ಕಾನೂನಿನ ಶಿಕ್ಷೆಯಿಂದ ನುಣುಚಿಕೊಳ್ಳಲು ಮೊಹಂತಿ ಮತ್ತವರ ಪುತ್ರ ಕಣ್ಮರೆಯಾಗಿದ್ದರು.

ರಾಜಸ್ತಾನದ ಕೋರ್ಟ್ ಅ.3ರಂದು ಅವರಿಗೆ ಜಾಮೀನುರಹಿತ ಬಂಧನದ ವಾರಂಟ್ ದಾರಿ ಮಾಡಿತ್ತು, ಕಾನೂನಿನ ಕೈಯಿಂದ ನುಣುಚಿಕೊಳ್ಳಲು ಮೊಹಂತಿ ಮತ್ತು ಅವರ ಪುತ್ರ ತಪ್ಪಿಸಿಕೊಂಡು ತಿರುಗುತ್ತಿದ್ದರು. ಮೊಹಂತಿ ಅವರ ಆಸ್ತಿ ಮುಟ್ಟುಗೋಲು ಸಲುವಾಗಿ ಅವರ ಆಸ್ತಿಯ ವಿವರ ನೀಡುವಂತೆ ಜಿಲ್ಲಾದಿಕಾರಿಗೆ ಕೋರ್ಟ್ ತಿಳಿಸಿತ್ತು.
ಮತ್ತಷ್ಟು
ಮಧ್ಯಂತರ ಚುನಾವಣೆ ಸಾಧ್ಯತೆಯಿಲ್ಲ: ಪಾಸ್ವಾನ್
ಸೌರ ವಿದ್ಯುತ್ ಘಟಕಕ್ಕೆ ಪ್ರೋತ್ಸಾಹ ಧನ
ಕನಕದುರ್ಗಾ ಮಂದಿರ ಬಳಿ ಕಾಲ್ತುಳಿತ: 6 ಸಾವು
ಗುಜರಾತಿಗಳ ಮೇಲೆ ದಾಳಿ: ಮೋದಿ ಕಳವಳ
ಚುಡಾಯಿಸಿದ ಲಾಲು ಪುತ್ರರಿಗೆ ಪೆಟ್ಟು
ವಿನ್ಯಾಸಕನ ಮೇಲೆ ದೂರು ನಿರಾಧಾರ