ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಬು ಸಲೇಂ ಇಂದು ಕೋರ್ಟ್‌ಗೆ ಹಾಜರು
ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತಲೋಕದ ದೊರೆ ಅಬು ಸಲೇಂ ಗುರುವಾರ ಹೈದರಾಬಾದ್ ಕೋರ್ಟ್ ಎದುರು ಹಾಜರಾಗಲಿದ್ದಾನೆ. ಕಳೆದ ಡಿ.20ರಂದು ವಿಶೇಷ ನ್ಯಾಯಾಧೀಶರ ಎದುರು ಹಾಜರಾದ ಸಲೇಂನಿಗೆ ಜ.3ರವರೆಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿತ್ತು.

ಸಿಬಿಐನ ವಿಶೇಷ ನ್ಯಾಯಾಧೀಶರು ರಜೆಯ ಮೇಲಿರುವುದರಿಂದ ಸಲೇಂನನ್ನು ಇನ್ನೊಬ್ಬ ವಿಶೇಷ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಸಲೇಂನನ್ನು ನಕಲಿ ಪಾಸ್‌ಪೋರ್ಟ್ ಹಗರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ತೆಗೆದುಕೊಳ್ಳಲು ಸಿಬಿಐ ಅರ್ಜಿ ಸಲ್ಲಿಸಿತ್ತು.

1993ರ ಮುಂಬೈ ಬಾಂಬ್ ಸ್ಫೋಟ ಮತ್ತು ಬಾಲಿವುಡ್ ನಿರ್ಮಾಪಕ ಗುಲ್ಶನ್ ಕುಮಾರ್ ಹತ್ಯೆ, ಬಾಲಿವುಡ್ ನಟಿ ಮೋನಿಶಾ ಕೊಯಿರಾಲಾ ಕಾರ್ಯದರ್ಶಿ ಮತ್ತು ಬಿಲ್ಡರ್ ಹತ್ಯೆಗಳಿಗೆ ಸಂಬಂಧಿಸಿದಂತೆ ಮತ್ತು ಇನ್ನೂ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸಲೇಂ ಆರೋಪಿಯಾಗಿದ್ದಾನೆ.
ಮತ್ತಷ್ಟು
ಅಸ್ಸಾಂನಲ್ಲಿ ಅನಿರ್ದಿಷ್ಟ ಕರ್ಫ್ಯೂ ಮುಂದುವರಿಕೆ
2 ವಾರ ಕಾಲಾವಕಾಶ ಕೋರಿದ ಮೊಹಂತಿ
ಮಧ್ಯಂತರ ಚುನಾವಣೆ ಸಾಧ್ಯತೆಯಿಲ್ಲ: ಪಾಸ್ವಾನ್
ಸೌರ ವಿದ್ಯುತ್ ಘಟಕಕ್ಕೆ ಪ್ರೋತ್ಸಾಹ ಧನ
ಕನಕದುರ್ಗಾ ಮಂದಿರ ಬಳಿ ಕಾಲ್ತುಳಿತ: 6 ಸಾವು
ಗುಜರಾತಿಗಳ ಮೇಲೆ ದಾಳಿ: ಮೋದಿ ಕಳವಳ