ಗುಜರಾತಿನಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಇನ್ನೂ 9 ಸಂಪುಟ ದರ್ಜೆ ಸಚಿವರು ಮತ್ತು ಅಷ್ಟೇ ಸಂಖ್ಯೆಯ ರಾಜ್ಯ ಸಚಿವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ವಿಸ್ತರಿಸಲಾಗಿದೆ. ರಾಜ್ಯಪಾಲ ನವಲ್ ಕಿಶೋರ್ ಶರ್ಮಾ ಶುಕ್ರವಾರ ಬೆಳಿಗ್ಗೆ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಗುಜರಾತ್ ವಿಧಾನಸಭೆ ಕಟ್ಟಡದ ಹೊರಗೆ ವಿಸ್ತಾರವಾದ ಹುಲ್ಲುಹಾಸಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನರೇಂದ್ರ ಮೋದಿ,ರಾಜ್ಯ ಬಿಜೆಪಿ ನಾಯಕರು ಮತ್ತು ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಎಲ್ಲ ಸಚಿವರು ಗುಜರಾತಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟದಲ್ಲಿ ಏಳು ಮಂದಿ ಸಚಿವರಿರುವುದು ಮಹತ್ವ ಪಡೆದಿದೆ. ಕೆಲವು ದಿನಗಳಿಂದ ಆರಂಭವಾದ ತೀವ್ರ ಸಮಾಲೋಚನೆಗಳು ಶುಕ್ರವಾರ ನಸುಕಿನಲ್ಲಿ ಕೊನೆಗೊಂಡ ಬಳಿಕ ಸಂಪುಟ ವಿಸ್ತರಣೆ ನೆರವೇರಿದೆ.
|