ರಾಷ್ಟ್ರದ ರಾಜಧಾನಿಯಲ್ಲಿ ಭಯೋತ್ಪಾದನೆ ದಾಳಿಗೆ ಯೋಜಿಸಿದ್ದ ನಾಲ್ವರು ಶಂಕಿತ ಬಬ್ಬರ್ ಖಾಲ್ಸಾ ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಬಲಜೀತ್ ಸಿಂಗ್, ಬಿಕಾರ್ ಸಿಂಗ್, ಕುಲ್ವಿಂದರ್ ಜೀತ್ ಸಿಂಗ್ ಮತ್ತು ತ್ರಿಲೋಚನ ಸಿಂಗ್ ಎಂದು ಗುರುತಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅವರಿಂದ ನಾಲ್ಕು ಪಿಸ್ತೂಲು ಮತ್ತು 125 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನೆ ವಿರೋಧಿ ಉನ್ನತ ದಳವು ಗುರುವಾರ ಬಂಧಿಸಿದ ಈ ಉಗ್ರರು ರಾಜಧಾನಿಯನ್ನು ಭಯೋತ್ಪಾದನೆ ದಾಳಿಯ ಮೂಲಕ ತಲ್ಲಣಗೊಳಿಸಲು ಯೋಜಿಸಿದ್ದರೆಂದು ಅಧಿಕಾರಿ ತಿಳಿಸಿದರು.
ಈ ವರ್ಷ ರಾಜಧಾನಿಯಲ್ಲಿ ಉಗ್ರರ ಬಂಧನ ಇದೇ ಪ್ರಥಮವಾಗಿದೆ. ಕಳೆದ ವರ್ಷ 19 ಉಗ್ರಗಾಮಿಗಳನ್ನು ಬಂಧಿಸಲಾಗಿತ್ತು ಮತ್ತು ನಾಲ್ವರನ್ನು ಹತ್ಯೆ ಮಾಡಲಾಗಿತ್ತು.
|