ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಗಾಲ್ಯಾಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ಕೇಂದ್ರ ಸಂಪುಟದ ಶಿಫಾರಸಿನ ಮೇಲೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಅಂಗೀಕಾರದ ಮುದ್ರೆ ಹಾಕುವುದರೊಂದಿಗೆ ನಾಗಾಲ್ಯಾಂಡ್ ಗುರುವಾರ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ. ಜನವರಿ ಒಂದರಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಕ್ಯಾಬಿನೆಟ್ ಸಭೆಯ ನಿರ್ಧಾರವನ್ನು ಹೈದರಾಬಾದಿನಲ್ಲಿದ್ದ ಪ್ರತಿಭಾ ಪಾಟೀಲ್‌ ಅವರು ಸ್ವೀಕರಿಸಿದರು.

ಬಿಜೆಪಿ ಬೆಂಬಲಿತ ಪ್ರಜಾತಂತ್ರ ಒಕ್ಕೂಟವು ಕಳೆದ ತಿಂಗಳು ವಿವಾದಾತ್ಮಕ ಅವಿಶ್ವಾಸ ಮತ ಗೊತ್ತುವಳಿಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ ರಾಜಕೀಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸಚಿವ ಸಂಪುಟದ ಸಭೆ ಕರೆಯಲಾಗಿತ್ತು.

ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೊ ಡಿ.13ರಂದು ನಡೆದ ಬಲಾಬಲ ಪರೀಕ್ಷೆಯಲ್ಲಿ ಜಯಗಳಿಸಿದ್ದರು. ಮತದಾನದಲ್ಲಿ ಭಾಗವಹಿಸದಂತೆ ಮೂವರು ಪಕ್ಷೇತರರಿಗೆ ಸ್ಪೀಕರ್ ನಿಷೇಧ ವಿಧಿಸಿದ್ದರು ಮತ್ತು ಭಿನ್ನಮತೀಯ ಎನ್‌ಪಿಎಫ್ ಸದಸ್ಯರ ಮತ ಕ್ರಮಬದ್ಧವಲ್ಲ ಎಂದು ತೀರ್ಮಾನಿಸಿತ್ತು. ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿಯಲ್ಲಿ ವಿದಾನಸಭೆ ಚುನಾವಣೆಗಳು ನಡೆಯುವುದಕ್ಕೆ ಮುಂಚಿತವಾಗಿ ರಾಷ್ಟ್ರಪತಿ ಆಡಳಿತ ಜಾರಿಮಾಡಲಾಗಿದೆ.
ಮತ್ತಷ್ಟು
ಮೂವರ ಗಲ್ಲುಶಿಕ್ಷೆಗೆ ತಾತ್ಕಾಲಿಕ ಉಪಶಮನ
ಬಬ್ಬರ್ ಖಾಲ್ಸಾದ ನಾಲ್ವರು ಉಗ್ರರ ಬಂಧನ
ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ
ಮೋದಿಗೊಂದು ಮಂದಿರ, ಮೋದಿ ಚಾಲೀಸಾ!
ಎಂಟನೇ ತರಗತಿ ವಿದ್ಯಾರ್ಥಿ ಗುಂಡಿಗೆ ಬಲಿ
ಪರಿಸರ ಹಾನಿ: ಕೈಗಾರಿಕೆ ರಾಷ್ಟ್ರಗಳು ಹೊಣೆ