ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಜ್ವಾನುರ್ ಸಾವು ಕೊಲೆಯಲ್ಲ, ಆತ್ಮಹತ್ಯೆ
ಕೋಲ್ಕತಾದಲ್ಲಿ ಸೆ.21ರಂದು ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದ ಕಂಪ್ಯೂಟರ್ ಗ್ರಾಫಿಕ್ಸ್ ಶಿಕ್ಷಕ ರಿಜ್ವಾನುರ್ ರೆಹಮಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ಶುಕ್ರವಾರ ತಿಳಿಸಿದೆ. ಈ ಮುಂಚೆ ಶಂಕಿಸಿದಂತೆ ರಿಜ್ವಾನುರ್ ಸಾವು ಕೊಲೆಯಲ್ಲ ಆತ್ಮಹತ್ಯೆ ಎಂದು ಸಾಬೀತು ಮಾಡಲು ವೈಜ್ಞಾನಿಕ ಸಾಕ್ಷ್ಯಾಧಾರವಿದೆ ಎಂದು ಸಿಬಿಐ ತಿಳಿಸಿದೆ.

ರಿಜ್ವಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ನಿರ್ಧಾರವನ್ನು ಅಂತಿಮಗೊಳಿಸಿದ ಸಿಬಿಐ ಮೇಲಿನಂತೆ ವಾದಿಸಿದೆ. ಈ ವರದಿಯನ್ನು ಕೊಲ್ಕತಾ ಹೈಕೋರ್ಟ್‌ಗೆ ಶೀಘ್ರದಲ್ಲೇ ಸಲ್ಲಿಸಲಾಗುವುದು. ಕೋಲ್ಕತಾ ಶಿಕ್ಷಕನ ಆತ್ಮಹತ್ಯೆಗೆ ರಿಜ್ವಾನ್ ಪತ್ನಿ ಪ್ರಿಯಾಂಕ ತೋಡಿ ಕುಟುಂಬ ಕುಮ್ಮಕ್ಕು ನೀಡಿದೆಯೆಂದು ಸಿಬಿಐ ತಿಳಿಸಿದೆ.

ಪ್ರಿಯಾಂಕ ಅವರ ತಂದೆ ಅಶೋಕ್ ತೋಡಿ ಮತ್ತು ಚಿಕ್ಕಪ್ಪ ಪ್ರದೀಪ್ ತೋಡಿ ಅವರು ರಿಜ್ವಾನ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಸಿಬಿಐ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಬ್ಬರು ಮತ್ತು ಇದರಲ್ಲಿ ಒಳಗೊಂಡ ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಹೊರಿಸಲು ಅದು ಯೋಜಿಸಿದೆ.

ಕೋಲ್ಕತಾದ ಪ್ರತಿಷ್ಠಿತ ಉದ್ಯಮಿಯ ಪುತ್ರಿಯಾದ ಪ್ರಿಯಾಂಕ ಜತೆ ವಿವಾಹವಾದ ಬಳಿಕ ರಿಜ್ವಾನುರ್ ನಿಗೂಢ ರೀತಿಯಲ್ಲಿ ಸಾವಪ್ಪಿದ್ದರು.
ಮತ್ತಷ್ಟು
ನಾಗಾಲ್ಯಾಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ಮೂವರ ಗಲ್ಲುಶಿಕ್ಷೆಗೆ ತಾತ್ಕಾಲಿಕ ಉಪಶಮನ
ಬಬ್ಬರ್ ಖಾಲ್ಸಾದ ನಾಲ್ವರು ಉಗ್ರರ ಬಂಧನ
ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ
ಮೋದಿಗೊಂದು ಮಂದಿರ, ಮೋದಿ ಚಾಲೀಸಾ!
ಎಂಟನೇ ತರಗತಿ ವಿದ್ಯಾರ್ಥಿ ಗುಂಡಿಗೆ ಬಲಿ