ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಮಾಣು ಶಕ್ತಿಯಿಂದ ಇಂಧನ ಭದ್ರತೆ:ಸಿಂಗ್
PTI
ಭಾರತ-ಅಮೆರಿಕ ನಡುವೆ ಪ್ರಸಕ್ತ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ರಾಜಕೀಯ ವಾದವಿವಾದ ನಡೆಯುತ್ತಿರುವ ನಡುವೆ, ಪರಮಾಣು ಶಕ್ತಿಯು ದೀರ್ಘಾವಧಿಯಲ್ಲಿ ದೇಶದ ಇಂಧನ ಭದ್ರತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಬಲ್ಲದು ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ತಿಳಿಸಿದ್ದಾರೆ.

95ನೇ ಭಾರತೀಯ ವಿಜ್ಞಾನ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದೀರ್ಘಾವಧಿಯಲ್ಲಿ ಪರಮಾಣು ಶಕ್ತಿಯು ರಾಷ್ಟ್ರದ ಇಂಧನ ಭದ್ರತೆಗೆ ಪ್ರಮುಖ ಕೊಡುಗೆ ನೀಡಬಲ್ಲದೆಂದು ತಿಳಿಸಿದರು. ಈ ದೃಷ್ಟಿಯಿಂದಲೇ ನಾಗರಿಕ ಪರಮಾಣು ಸಾಮಗ್ರಿ, ಉಪಕರಣ ಮತ್ತು ತಂತ್ರಜ್ಞಾನಗಳ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಭಾರತ ಭಾಗವಹಿಸದಂತೆ ನಿರ್ಬಂಧಕ ಕ್ರಮಗಳನ್ನು ತೆಗೆಯುವಂತೆ ನಾವು ಕೋರಿಕೆ ಸಲ್ಲಿಸಿದ್ದೆವು ಎಂದು ಪ್ರಧಾನಿ ನುಡಿದರು.
.
ಜಾಗತಿಕ ತಾಪಮಾನವು ರಾಷ್ಟ್ರದ ಅಭಿವೃದ್ಧಿ ಅವಕಾಶಗಳು ಮತ್ತು ಜನರ ಜೀವನಕ್ಕೆ ದೊಡ್ಡ ಸವಾಲಾಗಿದೆ ಎಂದು ನುಡಿದ ಸಿಂಗ್, ಪರ್ಯಾಯ ಮರುಬಳಕೆ ಇಂಧನದ ಮೂಲಗಳ ಅಭಿವೃದ್ಧಿಗೆ ಕರೆನೀಡಿದರು.
ಮತ್ತಷ್ಟು
ರಿಜ್ವಾನುರ್ ಸಾವು ಕೊಲೆಯಲ್ಲ, ಆತ್ಮಹತ್ಯೆ
ನಾಗಾಲ್ಯಾಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ಮೂವರ ಗಲ್ಲುಶಿಕ್ಷೆಗೆ ತಾತ್ಕಾಲಿಕ ಉಪಶಮನ
ಬಬ್ಬರ್ ಖಾಲ್ಸಾದ ನಾಲ್ವರು ಉಗ್ರರ ಬಂಧನ
ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ
ಮೋದಿಗೊಂದು ಮಂದಿರ, ಮೋದಿ ಚಾಲೀಸಾ!