ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ಷರಧಾಮ ದೇವಳ ಸ್ಫೋಟಕ್ಕೆ ಉಗ್ರರ ಸಂಚು
ಕಾಶ್ಮೀರಿ ಉಗ್ರಗಾಮಿಗಳು ಅಕ್ಷರಧಾಮ ದೇವಳವನ್ನು ಸ್ಫೋಟಿಸಲು ಸಂಚು ನಡೆಸಿದ್ದಾರೆಂದು ಗುಪ್ತಚರ ಮಾಹಿತಿಗಳನ್ನು ಪೊಲೀಸರು ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಲ್ಲಿನ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಅಕ್ಷರಧಾಮ ದೇವಸ್ಥಾನದ ಸ್ಫೋಟಕ್ಕೆ ಸಂಚು ನಡೆಸುವ ಮೂಲಕ ರಾಜಧಾನಿಯಲ್ಲಿ ಭಯದ ವಾತಾವರಣ ಮೂಡಿಸಲು ಕಾಶ್ಮೀರಿ ಮೂಲದ ಕೆಲವು ಉಗ್ರಗಾಮಿಗಳು ನಿರ್ಧರಿಸಿರುವ ಗುಪ್ತಚರ ವರದಿಗಳು ತಮಗೆ ತಲುಪಿದ್ದಾಗಿ ಪೊಲೀಸ್ ಉಪ ಆಯುಕ್ತ ತಿಳಿಸಿದ್ದಾರೆ.

ಆದರೆ ಉಗ್ರಗಾಮಿಗಳ ತಂಡ ಯಾವುದೆಂಬುದನ್ನು ಅವರು ಹೆಸರಿಸಲಿಲ್ಲ. ಈ ಮಾಹಿತಿಗಳ ಹಿನ್ನೆಲೆಯಲ್ಲಿ ಪೂರ್ವ ದೆಹಲಿಯ ಯಮುನಾ ನದಿ ದಂಡೆಮೇಲಿರುವ ಅಕ್ಷರಧಾಮ ದೇವಳಕ್ಕೆ ಪೊಲೀಸರು ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಭದ್ರತೆ ಬಿಗಿಗೊಳಿಸಲಾಗಿದೆ.

ಅಕ್ಷರಧಾಮ ದೇವಳವು ವಿಶ್ವದ ಅತ್ಯಂತ ದೊಡ್ಡ ಹಿಂದೂ ದೇವಳ ಸಂಕೀರ್ಣವಾದ ಹಿನ್ನೆಲೆಯಲ್ಲಿ ಗಿನ್ನಿಸ್ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿದೆ. ಅಕ್ಷರಧಾಮ ದೇವಳವು ವಿಸ್ತಾರವಾದ ಹುಲ್ಲುಹಾಸಿನಿಂದ 86,342 ಚದರ ಅಡಿ ಪ್ರದೇಶವನ್ನು ಹೊಂದಿದೆ.
ಮತ್ತಷ್ಟು
ಪರಮಾಣು ಶಕ್ತಿಯಿಂದ ಇಂಧನ ಭದ್ರತೆ:ಸಿಂಗ್
ರಿಜ್ವಾನುರ್ ಸಾವು ಕೊಲೆಯಲ್ಲ, ಆತ್ಮಹತ್ಯೆ
ನಾಗಾಲ್ಯಾಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ಮೂವರ ಗಲ್ಲುಶಿಕ್ಷೆಗೆ ತಾತ್ಕಾಲಿಕ ಉಪಶಮನ
ಬಬ್ಬರ್ ಖಾಲ್ಸಾದ ನಾಲ್ವರು ಉಗ್ರರ ಬಂಧನ
ನರೇಂದ್ರ ಮೋದಿ ಸಚಿವ ಸಂಪುಟ ವಿಸ್ತರಣೆ