ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫ್ರೆಂಚ್ ಅಧ್ಯಕ್ಷರ ಗೆಳತಿಯ ಸ್ಥಾನಮಾನವೇನು?
ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಅವರು ಗಣರಾಜ್ಯ ದಿನದಂದು ಭಾರತದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಭಾರತ ಸರ್ಕಾರಕ್ಕೆ ನೀಡಿರುವ ನಿಯೋಗಿಗಳ ಆರಂಭಿಕ ಪಟ್ಟಿಯಲ್ಲಿ ಅಧ್ಯಕ್ಷರ ಸೂಪರ್‌ಮಾಡೆಲ್ ಗೆಳತಿ ಕಾರ್ಲಾ ಬ್ರೂನಿ ಹೆಸರು ಸಹ ಸೇರಿಕೊಂಡಿದೆ. ಆದರೆ ಈಗ ವಿದೇಶಾಂಗ ಸಚಿವಾಲಯ ಶಿಷ್ಟಾಚಾರಕ್ಕೆ ಬದ್ಧವಾಗಿದ್ದು, ಅಧ್ಯಕ್ಷರ ಗೆಳತಿಯನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವುದೇ ಸಮಸ್ಯೆಯಾಗಿದೆ.

ಭಾರತದ ಗೃಹಸಚಿವಾಲಯಕ್ಕೆ ಫ್ರಾನ್ಸ್ ಕಳಿಸಿದ ನಿಯೋಗಿಗಳ ಪಟ್ಟಿಯಲ್ಲಿ ಅಧ್ಯಕ್ಷರ ಜತೆ ಪ್ರಯಾಣಿಸುವವರ ಪಟ್ಟಿಯಲ್ಲಿ ಕಾರ್ಲ್ ಬ್ರೂನಿ ಹೆಸರೂ ಇದೆ. ಆದರೆ ಬ್ರೂನಿ ಅಧ್ಯಕ್ಷರ ಜತೆ ಸಾರ್ವಜನಿಕ ವೇದಿಕೆಯನ್ನು ಹಂಚಿಕೊಳ್ಳುವುದು ಕೆಲವು ಅಧಿಕಾರಿಗಳಿಗೆ ಹಿತಕಾರಿಯಾಗಿಲ್ಲ. ಅಧ್ಯಕ್ಷರ ಪಕ್ಕದಲ್ಲಿ ವೇದಿಕೆ ಹಂಚಿಕೊಳ್ಳುವುದಾದರೆ ಬ್ರೂನಿ ಅವರ ಸ್ಥಾನಮಾನ ಏನೆಂಬುದನ್ನು ಫ್ರೆಂಚ್ ಸರ್ಕಾರ ನಿರ್ಧರಿಸಬೇಕಿದೆ.

ಸಾರ್ಕೋಜಿ ಅವರ ಸಂಗಾತಿ ಬ್ರೂನಿ ಎಂದು ಅವರು ನಿರ್ಧರಿಸುವುದಾದರೆ ಅವರನ್ನು ಪತ್ನಿಯೆಂದು ಪರಿಗಣಿಸಬೇಕು. ಅಂದರೆ ಸಾರ್ಕೋಜಿ ಪಕ್ಕದಲ್ಲೇ ಅವರು ಔತಣಕೂಟದಲ್ಲಿ ಮತ್ತು ಸರ್ಕಾರಿ ಗೌರವದಲ್ಲಿ ಆಸೀನರಾಗಬೇಕಾಗುತ್ತದೆ. ಆದರೆ ಫ್ರೆಂಚ್ ಸರ್ಕಾರ ಅವರನ್ನು ಕಾಯಂ ನಿಯೋಗಿ ಸದಸ್ಯರನ್ನಾಗಿ ಮಾಡಬೇಕು ಅಥವಾ ಖಾಸಗಿ ಭೇಟಿಯನ್ನು ಅವರು ನೀಡಬೇಕಾಗುತ್ತದೆ.
ಮತ್ತಷ್ಟು
ಕಿರುಕುಳ: ಶಂಕಿತರ ಗುರುತು ಪತ್ತೆಗೆ ಪರೇಡ್
ಅಕ್ಷರಧಾಮ ದೇವಳ ಸ್ಫೋಟಕ್ಕೆ ಉಗ್ರರ ಸಂಚು
ಪರಮಾಣು ಶಕ್ತಿಯಿಂದ ಇಂಧನ ಭದ್ರತೆ:ಸಿಂಗ್
ರಿಜ್ವಾನುರ್ ಸಾವು ಕೊಲೆಯಲ್ಲ, ಆತ್ಮಹತ್ಯೆ
ನಾಗಾಲ್ಯಾಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ಮೂವರ ಗಲ್ಲುಶಿಕ್ಷೆಗೆ ತಾತ್ಕಾಲಿಕ ಉಪಶಮನ