ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮನೆಯಿಂದ ಹೊರಹೋಗಲು ಅವಕಾಶವಿಲ್ಲ: ತಸ್ಲೀಮಾ
PTI
ತಮ್ಮನ್ನು ದೆಹಲಿಯ ಅಜ್ಞಾತ ಸ್ಥಳದಲ್ಲಿರುವ ಮನೆಯಿಂದ ಹೊರಗೆ ಹೋಗಲು ಅವಕಾಶ ನೀಡುತ್ತಿಲ್ಲ ಮತ್ತು ಅವರನ್ನು ಭೇಟಿ ಮಾಡಲು ಇಚ್ಛಿಸುವವರಿಗೆ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಬಾಂಗ್ಲಾದೇಶದಿಂದ ಬಹಿಷ್ಕಾರಕ್ಕೆ ಒಳಗಾದ ತಸ್ಲೀಮಾ ನಸ್ರೀನ್ ದೂರುನೀಡಿದ್ದಾರೆ.

ಆಕೆಗೆ ಬೆಂಬಲವಾಗಿ ನಿಂತು ಕೋಲ್ಕತಾಗೆ ವಾಪಸು ಬರುವಂತೆ ಕರೆ ನೀಡಿರುವವರಿಗೆ ಈ ಮೇಲ್ ಸಂದೇಶ ಕಳಿಸಿರುವ ಅವರು, ತಮ್ಮನ್ನು ಭೇಟಿ ಮಾಡಲು ಇಚ್ಛಿಸುವವರು ಸರ್ಕಾರದಲ್ಲಿ ಮೇಲಿನವರಿಂದ ಅನುಮತಿ ಪಡೆಯಬೇಕು ಮತ್ತು ಅವರ ಭೇಟಿಯ ಕಾಲಾವಧಿ ಮತ್ತು ವೇಳೆಯನ್ನು ಅವರೇ ನಿಗದಿ ಮಾಡಬೇಕು ಎಂದು ನುಡಿದರು.

ಇಸ್ಲಾಂ ವಿರೋಧಿ ಲೇಖನಗಳ ವಿರುದ್ಧ ಮುಸ್ಲಿಂ ಸಂಘಟನೆಗಳು ಹಿಂಸಾತ್ಮಕ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕೋಲ್ಕತಾದಿಂದ ಕಳೆದ ನವೆಂಬರ್‌ನಲ್ಲಿ ಹೊರಗೆ ದಬ್ಬಲಾಗಿದ್ದ ನಸ್ರೀನ್ ಅವರು, ಅಗ್ನಿಸ್ಪರ್ಷ ಮತ್ತು ಹಿಂಸಾಚಾರದಲ್ಲಿ ನಿರತರಾಗಿರುವವರು ತಮ್ಮ ದ್ವಿಕಾಂಡಿತೊ ಪುಸ್ತಕವನ್ನು ಓದಿಲ್ಲ ಎಂದು ನುಡಿದರು.

ಪುಸ್ತಕದ ಕೆಲವು ವಿವಾದಾತ್ಮಕ ಭಾಗಗಳಿಂದ ಹಿಂಸಾಚಾರ ಉದ್ಭವಿಸಿಲ್ಲವೆಂದು ಒತ್ತಿಹೇಳಿದ ಅವರು, ವಿಶ್ವದಲ್ಲೇ ಯಾವುದೇ ಲೇಖಕರಾಗಲೀ ಅಥವಾ ತಾವಾಗಲೀ ಹಿಂಸಾಚಾರಕ್ಕೆ ಕಾರಣರಲ್ಲವೆಂದು ತಿಳಿಸಿದರು. 3 ವರ್ಷಗಳ ಕೆಳಗೆ ಪುಸ್ತಕವನ್ನು ಪ್ರಕಟಿಸಲಾಯಿತಾದರೂ ಆ ಸಂದರ್ಭದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳ ಸರ್ಕಾರ ನಿಷೇಧವನ್ನು ಹಿಂತೆಗೆದುಕೊಂಡ ಮೇಲೂ ಯಾವುದೇ ಹಿಂಸಾಚಾರ ಸಂಭವಿಸಿರಲಿಲ್ಲ ಎಂದು ಅವರು ನುಡಿದರು.

ತಾವು ದ್ವಿಕಾಂಡಿತೊದ ಆಕ್ಷೇಪಾರ್ಹ ಭಾಗವನ್ನು ತೆಗೆದುಹಾಕಿದ ಬಳಿಕ ಕೋಲ್ಕತಾಗೆ ಹಿಂತಿರುಗಲು ಯಾಕೆ ಅವಕಾಶ ನೀಡುವುದಿಲ್ಲ ಎಂದು ಪ್ರಶ್ನಿಸಿದರು.
ಮತ್ತಷ್ಟು
ಫ್ರೆಂಚ್ ಅಧ್ಯಕ್ಷರ ಗೆಳತಿಯ ಸ್ಥಾನಮಾನವೇನು?
ಕಿರುಕುಳ: ಶಂಕಿತರ ಗುರುತು ಪತ್ತೆಗೆ ಪರೇಡ್
ಅಕ್ಷರಧಾಮ ದೇವಳ ಸ್ಫೋಟಕ್ಕೆ ಉಗ್ರರ ಸಂಚು
ಪರಮಾಣು ಶಕ್ತಿಯಿಂದ ಇಂಧನ ಭದ್ರತೆ:ಸಿಂಗ್
ರಿಜ್ವಾನುರ್ ಸಾವು ಕೊಲೆಯಲ್ಲ, ಆತ್ಮಹತ್ಯೆ
ನಾಗಾಲ್ಯಾಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಜಾರಿ