ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮಸೇತು: ಹೊಸ ಪ್ರಮಾಣಪತ್ರಕ್ಕೆ ಚರ್ಚೆ
ರಾಮಸೇತು ವಿಷಯದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಹೊಸ ಪ್ರಮಾಣಪತ್ರ ಸಲ್ಲಿಸುವ ಬಗ್ಗೆ ಕೇಂದ್ರ ಸಾಂಸ್ಕತಿಕ ಸಚಿವೆ ಅಂಬಿಕಾ ಸೋನಿ ಅವರು ಪ್ರಧಾನಿ ಮನಮೋಹನ ಸಿಂಗ್ ಜತೆ ಚರ್ಚಿಸಿದರೆಂದು ಗೊತ್ತಾಗಿದೆ. ಸೋನಿ ಅವರು ಶುಕ್ರವಾರ ಪ್ರಧಾನಿ ಅವರನ್ನು ಭೇಟಿ ಮಾಡಿ ರಾಮಸೇತು ವಿಷಯ ಬಗ್ಗೆ ಹೊಸ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ ವಿವರ ನೀಡಿದರೆಂದು ಸಂಸ್ಕೃತಿ ಸಚಿವಾಲಯದ ಮೂಲಗಳು ತಿಳಿಸಿವೆ.

ಸೇತುಸಮುದ್ರಂ ಬಗ್ಗೆ ಕಳೆದ ಸೆಪ್ಟೆಂಬ‌ರ್‌ನಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ರಾಮನ ಅಸ್ತಿತ್ವವನ್ನೇ ಪುರಾತತ್ವ ಇಲಾಖೆ ಪ್ರಶ್ನಿಸಿದ್ದರಿಂದ ಸಚಿವೆ ಮುಜುಗರಕ್ಕೆ ಒಳಗಾಗಿದ್ದರು. ಹಿಂದೂ ಸಂಘಟನೆಗಳ ಬಲವಾದ ಪ್ರತಿಭಟನೆ ಬಳಿಕ ಪ್ರಮಾಣಪತ್ರವನ್ನು ಹಿಂತೆಗೆದುಕೊಳ್ಳಲಾಗಿತ್ತು,

ಹೊಸ ಪ್ರಮಾಣಪತ್ರವನ್ನು ಎಚ್ಚರಿಕೆಯ ಹೆಜ್ಜೆಯಿಂದ ರೂಪಿಸಲಾಗಿದ್ದು ಎನ್‌ಡಿಎ ಆಡಳಿತಾವಧಿಯಲ್ಲಿ ಯೋಜನೆ ಮೊಳಕೆಯೊಡೆಯಿತೆಂದು ಪ್ರಸ್ತಾಪಿಸಲಾಗಿದೆ.
ಮತ್ತಷ್ಟು
ಕ್ಯಾನ್ಸರ್ ಗುಣಪಡಿಸುವಿಕೆ: ಯೋಗಗುರುವಿಗೆ ಸವಾಲು
ಮನೆಯಿಂದ ಹೊರಹೋಗಲು ಅವಕಾಶವಿಲ್ಲ: ತಸ್ಲೀಮಾ
ಫ್ರೆಂಚ್ ಅಧ್ಯಕ್ಷರ ಗೆಳತಿಯ ಸ್ಥಾನಮಾನವೇನು?
ಕಿರುಕುಳ: ಶಂಕಿತರ ಗುರುತು ಪತ್ತೆಗೆ ಪರೇಡ್
ಅಕ್ಷರಧಾಮ ದೇವಳ ಸ್ಫೋಟಕ್ಕೆ ಉಗ್ರರ ಸಂಚು
ಪರಮಾಣು ಶಕ್ತಿಯಿಂದ ಇಂಧನ ಭದ್ರತೆ:ಸಿಂಗ್