ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಟ್ಟಾ ಹತ್ಯೆಗೆ ಖಾಲ್ಸಾ ಉಗ್ರರ ಸಂಚು
ದೆಹಲಿ ಪೊಲೀಸರ ಬಲೆಗೆ ಬಿದ್ದಿರುವ ಬಾಬಾರ್ ಖಾಲ್ಸಾ ಉಗ್ರರರು, ಮಣಿಂದರ್ ಸಿಂಗ್ ಬಿಟ್ಟಾ ಸೇರಿದಂತೆ, ಸಾರ್ವಜನಿಕ ವ್ಯಕ್ತಿಗಳ ಹತ್ಯೆಗೆ ಸಂಚು ಹೂಡಿದ್ದರೆಂಬ ವಿಚಾರ ಬಯಲಾಗಿದ್ದು, ಪಂಜಾಬಿನಲ್ಲಿ ಉಗ್ರವಾದ ಮರಳುತ್ತಿದೆ ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಬಂಧನಕ್ಕೀಡಾಗಿರುವ ನಿಷೇಧಿತ ಬಾಬರ್ ಖಾಲ್ಸಾ ಅಂತಾರಾಷ್ಟ್ರೀಯ (ಬಿಕೆಐ) ಉಗ್ರಗಾಮಿ ಸಂಘಟನೆಯ ಉಗ್ರರ ತನಿಖೆ ವೇಳೆಗೆ, ಅಖಿಲ ಭಾರತೀಯ ಭಯೋತ್ಪಾದನಾ ವಿರೋಧಿ ರಂಗದ ಅಧ್ಯಕ್ಷ ಬಿಟ್ಟಾ ಅವರ ಬೆಂಗಾವಲು ಮತ್ತು ಸಭಾಸ್ಥಳಗಳಲ್ಲಿ ದಾಳಿಗಳನ್ನು ನಡೆಸಲು ಯೋಜಿಸಿದ್ದರು ಎಂಬ ವಿಚಾರ ಗೊತ್ತಾಗಿದೆ.

ಪಂಜಾಬ್ ಪೊಲೀಸರಿಂದ ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿರುವ ಗುಪ್ತಚರ ವರದಿಯಲ್ಲಿ ಬಿಟ್ಟಾ ಅವರ ಭದ್ರತೆಗೆ ಭಾರೀ ಬೆದರಿಕೆ ಇದೆ ಎಂದು ಹೇಳಿದೆ. ಪಂಜಾಬಿನಲ್ಲಿ ಭಯೋತ್ಪಾದನೆ ಮತ್ತು ಸಂಸತ್ ದಾಳಿಯ ರೂವಾಹಿ ಮೊಹಮ್ಮದ್ ಅಫ್ಜಲ್ ಗಲ್ಲಿನ ಕುರಿತು ಬಿಟ್ಟಾ ಆಗಾಗ ದನಿ ಎತ್ತುತ್ತಿರುತ್ತಾರೆ.

ಪಾಕಿಕ್ತಾನ ಮೂಲದ ಲಷ್ಕರ್-ಇ-ತಯ್ಬಾದಂತಹ ಸಂಘಟನೆಗಳ ಸಹಾಯದೊಂದಿಗೆ ಬಾಬರ್ ಖಾಲ್ಸಾವು ಪಂಜಾಬಿನಲ್ಲಿ ಸದ್ದಿಲ್ಲದೆ ನೆಲೆ ಊರುತ್ತಿದೆ ಎಂಬ ವರದಿಗಳ ನಡುವೆಯೇ ಗುಪ್ತಚರ ವರದಿಗಳು ಹೊರಬಿದ್ದಿವೆ.
ಮತ್ತಷ್ಟು
ದೆಹಲಿ ಬೆಂಕಿ ಆಕಸ್ಮಿಕ: 7 ಸಾವು
ರಾಮಸೇತು: ಹೊಸ ಪ್ರಮಾಣಪತ್ರಕ್ಕೆ ಚರ್ಚೆ
ಕ್ಯಾನ್ಸರ್ ಗುಣಪಡಿಸುವಿಕೆ: ಯೋಗಗುರುವಿಗೆ ಸವಾಲು
ಮನೆಯಿಂದ ಹೊರಹೋಗಲು ಅವಕಾಶವಿಲ್ಲ: ತಸ್ಲೀಮಾ
ಫ್ರೆಂಚ್ ಅಧ್ಯಕ್ಷರ ಗೆಳತಿಯ ಸ್ಥಾನಮಾನವೇನು?
ಕಿರುಕುಳ: ಶಂಕಿತರ ಗುರುತು ಪತ್ತೆಗೆ ಪರೇಡ್