ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಣಿಪುರದ ಇಬ್ಬರು ಯುವತಿಯರಿಗೆ ಕಿರುಕುಳ
ಮುಂಬೈನಲ್ಲಿ ಇಬ್ಬರು ಅನಿವಾಸಿ ಭಾರತೀಯ ಮಹಿಳೆಯರಿಗೆ ಕಿರುಕುಳ ನೀಡಿದ ಘಟನೆಯ ಬೆನ್ನ ಹಿಂದೆಯೇ ದೆಹಲಿ ವಿಶ್ವವಿದ್ಯಾಲಯದ ಬಳಿ 25 ಮಂದಿ ಪಾನಮತ್ತ ಯುವಕರು ಮಣಿಪುರದ ಇಬ್ಬರು ಯುವತಿಯರಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಘಟನೆ ನಡೆದಿದೆ. ಉತ್ತರ ದೆಹಲಿಯ ಗಾಂಧಿ ವಿಹಾರ ಪ್ರದೇಶದಲ್ಲಿ ಮಣಿಪುರದ ಯುವತಿಯ ಮಾಲಿಕತ್ವದ ಸೈಬರ್ ಕೆಫೆಯಲ್ಲಿ ಶನಿವಾರ ರಾತ್ರಿ 9 ಗಂಟೆಗೆ ಈ ಘಟನೆ ನಡೆದಿದೆ.

ಆದರೆ ಪೊಲೀಸರು ಇಲ್ಲಿಯವರೆಗೆ ದೂರನ್ನು ಸ್ವೀಕರಿಸಿಲ್ಲ ಎಂದು ಬಾಲಕಿ ತಿಳಿಸಿದ್ದಾಳೆ. ಸುಮಾರು 25 ಮಂದಿ ಯುವಕರ ಗುಂಪು ಅಂಗಡಿಗೆ ಆಗಮಿಸಿ ನಿಂದಿಸಿದರು ಮತ್ತು ತಮ್ಮ ಮೇಲೆ ಮತ್ತು ಸಹೋದರನ ಮೇಲೆ ದೈಹಿಕ ದಾಳಿ ಮಾಡಿದರೆಂದು ಯುವತಿಯರು ಆಪಾದಿಸಿದ್ದಾರೆ. ಅಂಗಡಿಯನ್ನು ಸುಟ್ಟುಹಾಕುವುದಾಗಿ ಬೆದರಿಸಿದ ಯುವಕರು ಈಶಾನ್ಯ ರಾಜ್ಯದ ಯುವತಿಯರು ರಾಜಧಾನಿಯಲ್ಲಿ ಅನೈತಿಕತೆ ಹರಡುತ್ತಿದ್ದಾರೆಂದು ಆಪಾದಿಸಿ ಆ ಜಾಗವನ್ನು ಬಿಡುವಂತೆ ಆದೇಶಿಸಿದರೆಂದು ಸಹೋದರಿಯರು ದೂರಿದ್ದಾರೆ.

18 ವರ್ಷ ವಯಸ್ಸಿನ ಕಿರಿಯ ಸೋದರಿ ಸಮೀಪದ ಮಾರುಕಟ್ಟೆಗೆ ತೆರಳಿದ್ದಾಗ ರಾತ್ರಿ 7.30ಕ್ಕೆ ಘಟನೆಗಳ ಸರಮಾಲೆ ಆರಂಭವಾಯಿತೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮೋಟಾರ್ ಸೈಕಲ್‌ನಲ್ಲಿ ಆಗಮಿಸಿದ ಇಬ್ಬರು ಯುವಕರು ಯುವತಿಯನ್ನು ಕೆಣಕಲು ಯತ್ನಿಸಿದರು.

ಅವರ ಪ್ರಯತ್ನವನ್ನು ಪ್ರತಿರೋಧಿಸಿದ ಆಕೆ ತನ್ನ ಹಿರಿಯ ಸೋದರಿಗೆ ಘಟನೆಯನ್ನು ವಿವರಿಸಿದಳು. ಅರ್ಧ ಗಂಟೆಯ ಬಳಿಕ ಅವರ ಸೈಬರ್ ಕೆಫೆಗೆ ಇಬ್ಬರು ಯುವಕರು ಆಗಮಿಸಿ ಅವರ ಜತೆಗೆ ಜಗಳವಾಡಿ ಥಳಿಸಿದರೆಂದು ಯುವತಿಯರು ಆರೋಪಿಸಿದ್ದಾರೆ.
ಮತ್ತಷ್ಟು
ಬಿಟ್ಟಾ ಹತ್ಯೆಗೆ ಖಾಲ್ಸಾ ಉಗ್ರರ ಸಂಚು
ದೆಹಲಿ ಬೆಂಕಿ ಆಕಸ್ಮಿಕ: 7 ಸಾವು
ರಾಮಸೇತು: ಹೊಸ ಪ್ರಮಾಣಪತ್ರಕ್ಕೆ ಚರ್ಚೆ
ಕ್ಯಾನ್ಸರ್ ಗುಣಪಡಿಸುವಿಕೆ: ಯೋಗಗುರುವಿಗೆ ಸವಾಲು
ಮನೆಯಿಂದ ಹೊರಹೋಗಲು ಅವಕಾಶವಿಲ್ಲ: ತಸ್ಲೀಮಾ
ಫ್ರೆಂಚ್ ಅಧ್ಯಕ್ಷರ ಗೆಳತಿಯ ಸ್ಥಾನಮಾನವೇನು?