ಸಿಖ್ಖರ ಅತ್ಯುನ್ನತ ಪೀಠವು ಸೋಮವಾರ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯ ಹಂತಕರನ್ನು ಹುತಾತ್ಮರು ಎಂದು ಘೋಷಿಸುವ ವಿವಾದಾತ್ಮಕ ಕ್ರಮ ಕೈಗೊಂಡಿದೆ.
1984ರಲ್ಲಿ ನೀಲಿ ನಕ್ಷತ್ರ ಕಾರ್ಯಾಚರಣೆ ಸಲುವಾಗಿ ಸುವರ್ಣ ಮಂದಿರದೊಳಕ್ಕೆ ಭಾರತೀಯ ಸೇನೆಯನ್ನು ಕಳಿಸಿದ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ ಹಂತಕರಾದ ಸತ್ವಂತ್ ಸಿಂಗ್ ಮತ್ತು ಕೆಹಾರ್ ಸಿಂಗ್ ಅವರ ಕೃತ್ಯವನ್ನು ಅಕಾಲ್ ತಕ್ತ್‌ನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಶ್ಲಾಘಿಸಲಾಯಿತಂದು ಹೇಳಲಾಗಿದೆ.
ಈ ಧಾರ್ಮಿಕ ಸಮಾರಂಭದ ನೇತೃತ್ವವನ್ನು ಜಾತೇದಾರ್ ಜ್ಯಾನಿ ಜೋಗಿಂದರ್ ಸಿಂಗ್ ವೇದಾಂತಿ ವಹಿಸಿದ್ದರು. ಸತ್ವಂತ್ ಮತ್ತು ಕೇಹಾರ್ ಅವರಿಗೆ ಗಲ್ಲು ಶಿಕ್ಷೆ ನೀಡಲಾಯಿತು.
|