ಅಡಿಕೆಗಳನ್ನು ಕದ್ದ ಸಣ್ಣ ತಪ್ಪಿಗೆ ಜೀಪಿನ ಹಿಂಬದಿಗೆ ಕಟ್ಟಿ ಎರಡು ಕಿಮೀವರೆಗೆ ಎಳೆದುಕೊಂಡ ಹೋಗಿದ್ದಲ್ಲದೇ ನಿಷ್ಕರುಣೆಯಿಂದ ಥಳಿಸಿ ಕಣ್ಣಿಗೆ ಆಸಿಡ್ ಎರಚಿದ ಅಮಾನುಷ ಘಟನೆ ಜಲ್ಪೈಗುರಿಯ ದಕ್ಷಿಣ ಬಲ್ಲಾಲ್‌ಗುರಿ ಗ್ರಾಮದಲ್ಲಿ ಸಂಭವಿಸಿದೆ.
ಕೇವಲ ಅಡಿಕೆಗಳನ್ನು ಕದ್ದಿದ್ದಕ್ಕೆ ಭಾರೀ ಬೆಲೆ ತೆರಬೇಕಾಗಿ ಬಂದ ಸಂತೋಷ ರಾಯ್ ಎಂಬ ದುರ್ದೈವಿ(26 ವರ್ಷ) ಈ ಘಟನೆ ಬಳಿಕ ಎಲ್ಲಿದ್ದಾನೆಂಬುದು ಪತ್ತೆಯಾಗಿಲ್ಲ. ರಾಯ್‌ನನ್ನು ಹಿಡಿದ ಗ್ರಾಮಸ್ಥರು ಜೀಪಿಗೆ ಕಟ್ಟಿ 2 ಕಿಮೀ ದೂರದ ಪಂಚಾಯತ್ ಕಚೇರಿಗೆ ಎಳೆದುಕೊಂಡು ಹೋದ ಬಳಿಕ ಅವನಿಗೆ ತೀವ್ರವಾಗಿ ಥಳಿಸಿ ಕಣ್ಣಿಗೆ ಆಸಿಡ್ ಎರಚಲಾಯಿತೆಂದು ತಿಳಿದುಬಂದಿದೆ.
ಕಳೆದ ವರ್ಷ ಬಿಹಾರದಲ್ಲಿ ಕಳ್ಳನೊಬ್ಬನನ್ನು ಅಮಾನುಷವಾಗಿ ಥಳಿಸಿ ಕೊಂದ ಘಟನೆಯನ್ನು ಇದು ನೆನಪಿಗೆ ತರುತ್ತದೆ .ಶನಿವಾರ ನಡೆದ ಈ ಅಮಾನವೀಯ ಘಟನೆಯು ಸಂತೋಷ್ ಕಾಣೆಯಾಗಿದ್ದಾನೆಂದು ಅವನ ಸೋದರ ಪೊಲೀಸರಿಗೆ ದೂರು ನೀಡಿದಾಗ ಬೆಳಕಿಗೆ ಬಂತು.
ಸಂತೋಷನನ್ನು ಗುಂಪು ತೋರ್ಷಾ ನದಿಯತ್ತ ಎಳೆದುಕೊಂಡು ಹೋದಾಗ ಕೊನೆಯ ಬಾರಿ ಕಂಡಿದ್ದಾಗಿ ಅವನ ಸೋದರ ದೂರಿನಲ್ಲಿ ತಿಳಿಸಿದ್ದಾರೆ. ಸಂತೋಷನ ತಲೆಯನ್ನು ಕಲ್ಲಿನಿಂದ ಜಜ್ಜಲಾಗಿದೆ ಎಂದು ಕೂಡ ಹೇಳಲಾಗಿದೆ.
|