ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಿಜ್ವಾನುರ್ ಸಾವು: ಸಿಬಿಐ ಅಂತಿಮ ವರದಿ
ರಿಜ್ವಾನುರ್ ರೆಹಮಾನ್ ಸಾವಿನ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ದಳವು ಕೋಲ್ಕತಾ ಹೈಕೋರ್ಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ಅಂತಿಮ ತನಿಖಾ ವರದಿಯನ್ನು ಸಲ್ಲಿಸಿದೆ. ಈ ಪ್ರಕರಣದ ಬಗ್ಗೆ ಮುಂದಿನ ವಿಚಾರಣೆ ನಡೆಯುವ ಶುಕ್ರವಾರದವರೆಗೆ ವರದಿಯನ್ನು ಮೊಹರು ಮಾಡಿಡಲಾಗುವುದು ಎಂದು ವರದಿ ಸ್ವೀಕರಿಸಿದ ಬಳಿಕ ಹೈಕೋರ್ಟ್ ತಿಳಿಸಿದೆ.

ಕಂಪ್ಯೂಟರ್ ಗ್ರಾಫಿಕ್ಸ್ ಡಿಸೈನರ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಕನಿಷ್ಠ 7 ಜನರನ್ನು ವರದಿಯಲ್ಲಿ ತಪ್ಪಿತಸ್ಥರನ್ನಾಗಿ ಮಾಡಿರುವ ಸಂಭವವಿದೆ. ಸಿಬಿಐ ತನ್ನ ವರದಿಯಲ್ಲಿ ರಿಜ್ವಾನ್ ಮಾವ, ಪ್ರತಿಷ್ಠಿತ ಉದ್ಯಮಿ ಅಶೋಕ್ ತೋಡಿ, ಪತ್ನಿಯ ಚಿಕ್ಕಪ್ಪ ಪ್ರದೀಪ್ ತೋಡಿ ಅವರನ್ನು ರಿಜ್ವಾನ್ ಆತ್ಮಹತ್ಯೆಗೆ ಜವಾಬ್ದಾರಿಯಾಗಿ ಮಾಡಿದ್ದಾರೆಂದು ನಂಬಲಾಗಿದೆ.

ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಕೂಡ ಸಿಬಿಐ ತನ್ನ ವರದಿಯಲ್ಲಿ ಆರೋಪಿಗಳನ್ನಾಗಿ ಹೆಸರಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಬಿಐ ಹೈಕೋರ್ಟ್‌ಗೆ ಕೋರಿದೆ.

ಈ ಮುಂಚೆ ಶಂಕಿಸಿದಂತೆ ರಿಜ್ವಾನ್ ಹತ್ಯೆಯಾಗಿರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಿಬಿಐ ದೃಢಪಡಿಸಿದೆ. ಪ್ರಿಯಾಂಕ ತೋಡಿಯ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಅವರ ಕುಟುಂಬ ಕುಮ್ಮಕ್ಕು ನೀಡಿದೆಯೆಂದು ಕೂಡ ಸಿಬಿಐ ಆರೋಪಿಸಿದೆ. ರಿಜ್ವಾನ್ ದೇಹವು ಸೆ.21ರಂದು ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು.

ರಿಜ್ವಾನ್ ಸಾವು ಆತ್ಮಹತ್ಯೆ ಎನ್ನುವುದಕ್ಕೆ ತನ್ನ ಬಳಿ ವೈಜ್ಞಾನಿಕ ಆಧಾರವಿದೆ ಎಂದೂ ಸಿಬಿಐ ತಿಳಿಸಿತ್ತು. ಕೋಲ್ಕತಾದ ಉದ್ಯಮಿ ಅಶೋಕ್ ತೋಡಿ ಅವರ ಪುತ್ರಿಯನ್ನು ವಿವಾಹವಾದ ಬಳಿಕ ರಿಜ್ವಾನ್ ನಿಗೂಢ ರೀತಿಯಲ್ಲಿ ಸಾವಪ್ಪಿದ್ದರು.
ಮತ್ತಷ್ಟು
ಪಾಲಾರ್ ಜಲಾಶಯ: ಕೇಂದ್ರ ಮಧ್ಯಪ್ರವೇಶಕ್ಕೆ ಸು.ಕೋ ಆದೇಶ
ಜಲಂಧರ್ ಜೈಲಿಗೆ ಕೈದಿಗಳಿಂದ ಅಗ್ನಿಸ್ಪರ್ಶ
ಅಡಿಕೆ ಕದ್ದ ಸಣ್ಣ ತಪ್ಪಿಗೆ ಅಮಾನುಷ ಶಿಕ್ಷೆ
ಮಾಯಾವತಿ ಆರೋಪ ತಳ್ಳಿಹಾಕಿದ ಕಾಂಗ್ರೆಸ್
2009ರಲ್ಲಿ ಅಗ್ನಿ-3 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ
ಪ್ರಸಕ್ತ ಬೆಳವಣಿಗೆ ಚರ್ಚೆಗೆ ಯುನ್‌ಪಿಎ ಸಭೆ